ಅಡ್ಯಾರ್‌ನಲ್ಲಿ ಸಂಗೀತದ ಸುಧೆ ಹರಿಸಿದ ಡಾ.ಎಸ್‌ಪಿ ಬಾಲಸುಬ್ರಹ್ಮಣ್ಯಂ

Update: 2020-01-19 18:08 GMT

ಮಂಗಳೂರು, ಜ.19: ಖ್ಯಾತ ಸಂಗೀತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ನಗರ ಹೊರವಲಯದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ರವಿವಾರ ಸಂಜೆ ನಡೆದ ‘ಸಂಗೀತ ಸಂಜೆ’ ಕಾರ್ಯಕ್ರಮಲ್ಲಿ ಸಂಗೀತದ ಸುಧೆ ಹರಿಸಿ ಪ್ರೇಕ್ಷಕರ ಮನ ರಂಜಿಸಿದರು.

ರಾಜ್ಯದ ನೆರೆಸಂತ್ರಸ್ತರ ಸಹಾಯಾರ್ಥವಾಗಿ ಬಾಲಸುಬ್ರಹ್ಮಣ್ಯಂ ಅವರು ಪಂಚಭಾಷೆಗಳಲ್ಲಿ (ಕನ್ನಡ, ತುಳು, ತೆಲುಗು, ತಮಿಳು, ಹಿಂದಿ) ಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಈ ಹಿಂದೆ ಧ್ವನಿ ಪರೀಕ್ಷೆಯಲ್ಲಿ ಆಯ್ಕೆಯಾದ ಕಲಾವಿದರಾದ ಜನ್ಯ, ಪ್ರಸಾದ್, ಪವಿತ್ರ ಮಯ್ಯ, ವಿಜಿತ ಉಳ್ಳಾಲ್, ಭಾಗ್ಯಶ್ರೀ, ರಕ್ಷಿತಾ ನಾಯಕ್, ಅದಿತ್ಯ ಕರ್ಕೇರಾ ಕೂಡ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ವಿಶ್ವ ಕನ್ನಡ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ ಸಾಗರ್, ಎಸ್.ಎಲ್.ಭಾರದ್ವಾಜ್, ಡಿಕ್ಸ್ ಸಂಸ್ಥೆಯ ಸೂರಜ್ ರೈ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News