ಮದ್ರಸ ಸಮಿತಿಗಳು ಜವಾಬ್ದಾರಿ ಅರಿತು ಕಾರ್ಯಾಚರಿಸಲಿ: ಜೆಪ್ಪುಮದನಿ

Update: 2020-01-19 16:54 GMT

ಬೈಂದೂರು, ಜ.19: ಮಸೀದಿ, ಮದ್ರಸಗಳು ಶಾಂತಿಯ ಕೇಂದ್ರಗಳು. ಈ ಕೇಂದಗಳ ಮೇಲ್ನೊಟವನ್ನು ವಹಿಸಿ ಆಡಳಿತ ನಡೆಸುವ ಪ್ರತಿಯೊಬ್ಬ ಸದಸ್ಯರೂ ಜವಾಬ್ದಾರಿ ಅರಿತವರಾಗಿಬೇಕೆಂದು ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿ ಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಅಭಿಪ್ರಾಯ ಪಟ್ಟಿದ್ದಾರೆ.

ನಾವುಂದ ಎಸ್‌ಎಂಎ ಸಮಿತಿಯ ವತಿಯಿಂದ ಇತ್ತೀಚೆಗೆ ನಾವುಂದದಲ್ಲಿ ಆಯೋಜಿಸಲಾದ ರೀಜಿನಲ್ ಲೀಡರ್ಸ್ ಮೀಟ್-2020 ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಮಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ನಾವುಂದ ಮುಹ್’ಯದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ಲತೀಫ್ ಅಲ್ಫಾಳಿಲಿ ಉದ್ಘಾಟಿಸಿದರು. ರೀಜಿನಲ್ ಅಧ್ಯಕ್ಷ ಅಬ್ದುಸ್ಸತ್ತಾರು ಕೋಯನಗರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಖತ್ತರ್ ಬಾವಾ ಹಾಜಿ ಮಾತನಾಡಿದರು.

ಎಸ್‌ಎಂಎ ಉಡುಪಿ ಜಿಲ್ಲಾಧ್ಯಕ್ಷ ಮನ್ಸೂರು ಕೋಡಿ, ಕೋಶಾಧಿಕಾರಿ ರಮಳಾನ್ ಆಕಳಬೈಲು, ಕುಂದಾಪುರ ವಲಯ ಅಧ್ಯಕ್ಷ ಯೂಸುಫ್ ಮಾವಿನ ಕಟ್ಟೆ, ಕೋಶಾಧಿಕಾರಿ ಅಯ್ಯೂಬ್ ಮಾಣಿಕೊಳಲು, ರಾಜ್ಯ ಸಮಿತಿ ಸದಸ್ಯ ಸೈಫುಲ್ಲಾ ಸಖಾಫಿ ಮರವಂತೆ, ಎಸ್‌ಎಂಎ ಮಾಜಿ ಅಧ್ಯಕ್ಷ ಬಿ.ಎಸ್. ಮೊಯಿದೀನ್ ಹಾಜಿ, ಹಿರಿಯರಾದ ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ಆಕಳಬೈಲು, ರೇಂಜ್ ಪ್ರಧಾನ ಕಾರ್ಯದರ್ಶಿ ಶಾಫೀ ಸಖಾಫಿ ಆಕಳಬೈಲು, ನಾವುಂದ ಮದ್ರಸ ಕಮಿಟಿ ಕಾರ್ಯದರ್ಶಿ ಎನ್.ಮೊಯಿದೀನ್, ಎಂ.ಜೆ.ಎಂ. ನಾವುಂದ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸತ್ತಾರ್ ಮೊದಲಾದವರು ಉಪಸ್ಥಿತರಿದ್ದರು.

ರೇಂಜ್ ಅಧ್ಯಕ್ಷ ಎಸ್.ಎಂ.ಹನೀಫ್ ಸಅದಿ ನಾವುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಂಜ್ ಮಿಷನರಿ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಸಖಾಫಿ ಗಂಗೊಳ್ಳಿ ಕುರಾನ್ ಪಠಿಸಿದರು. ಎಸ್‌ಎಂಎ ನಾವುಂದ ಪ್ರಧಾನ ಕಾರ್ಯದರ್ಶಿ ಕೊಂಬಾಳಿ ಝುಹುರಿ ಸ್ವಾಗತಿಸಿದರು. ಸಂಘಟನಾ ಕಾರ್ಯ ದರ್ಶಿ ಸಮದ್ ಸಖಾಫಿ ಮಾಣಿಕೊಳಲು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News