ಖಾಸಗಿ ಮಸೂದೆ ಮಂಡಿಸಲು ಲೀಗ್ ಮನವಿ
Update: 2020-01-19 22:44 IST
ಮಂಗಳೂರು, ಜ.19: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧದ ಹೋರಾಟದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಾಂವಿಧಾನಿಕ ಹೋರಾಟವನ್ನು ಮಾಡಲಿದೆ. ಅದರ ಭಾಗವಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಿಟಿಜನ್ ಶಿಪ್ ಕಾಯ್ದೆ 1955ಕ್ಕೆ ತಿದ್ದುಪಡಿ ತರಲು ಖಾಸಗಿ ಮಸೂದೆಯನ್ನು ಮಂಡಿಸಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಸಂಸದ ಕುಂಞಾಲಿಕುಟ್ಟಿ, ಲೀಗ್‌ನ ಇತರ ಸಂಸದರಾದ ಇಟಿ ಮುಹಮ್ಮದ್ ಬಶೀರ್, ಅಬ್ದುಲ್ ವಹಾಬ್, ಕೆ. ನವಾಝ್ ಅವರಿಗೆ ಮನವಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಾರ್ಯಕಾರಿ ಸಮಿತಿಯ ಸದಸ್ಯ ನ್ಯಾಯವಾದಿ ಸುಲೈಮಾನ್ ಎಸ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.