ಬಂಟ್ವಾಳ: ತೆಲುಗು ವಚನಕಾರ ವೇಮನ ಜಯಂತಿ

Update: 2020-01-19 17:18 GMT

ಬಂಟ್ವಾಳ : ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಮಟ್ಟದ ತೆಲುಗು ವಚನಕಾರ ವೇಮನ ಜಯಂತಿ ಕಾರ್ಯಕ್ರಮ ರವಿವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಜರಗಿತು. 

ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಮಾಜಿಕ ನ್ಯಾಯ ಮತ್ತು ಸಾಮಾನತೆಯ ಉದ್ದೇಶದಿಂದ ಆದರ್ಶ ವ್ಯಕ್ತಿಗಳ ಜಯಂತಿಯನ್ನು ಆಚರಣೆ ಮಾಡುತ್ತಿದೆ. ತೆಲುಗು ವಚನಕಾರ ವೇಮನ ಅವರು ತಮ್ಮ ಬಾಲ್ಯದಲ್ಲೇ ತಂದೆ ತಾಯಿಯಿಂದ ದೂರ ಸರಿದು, ಭೋಗದ ಜೀವನವನ್ನು ತ್ಯಜಿಸಿ ಮನಪರಿವರ್ತನೆಗೊಂಡರು. ಹೇಮರೆಡ್ಡಿ ಮಲ್ಲಮ್ಮ ಅವರ ತತ್ವ ಸಿದ್ಧಾಂತದಿಂದ ಪ್ರೇರಿತರಾಗಿ ಸಮಾಜದ ತೊಡಗುಗಳನ್ನು ಪರಿವರ್ತನೆ ಮಾಡುವತ್ತ ಹೆಜ್ಜೆಯನ್ನಿಟ್ಟು ಮಹಾಯೋಗಿಯಾದರು ಎಂದರು.

ತಾಲೂಕು ಕಚೇರಿಯ ಶಿರಸ್ತೇದಾರ ರಾಜೇಶ್ ನಾಯ್ಕ್, ಚುನಾವಣಾ ಶಾಖೆಯ ರಾಜ್‌ಕುಮಾರ್, ವಿಷಯ ನಿರ್ವಾಹಕ ವಿಷುಕುಮಾರ್ ಉಪಸ್ಥಿತರಿದ್ದರು. ಸಿಬಂದಿ ಸೀತಾರಾಮ ಸ್ವಾಗತಿಸಿ, ಮಹೇಂದ್ರ ವಂದಿಸಿದರು. ಮಲ್ಲೇಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News