ಟೂರಿಸಂ ಹಬ್ ಆಗಿ ಮಂಗಳೂರು ಅಭಿವೃದ್ಧಿ-ಡಾ.ಭರತ್ ಶೆಟ್ಟಿ

Update: 2020-01-19 17:21 GMT

ಮಂಗಳೂರು, ಜ.19:ಮಂಗಳೂರನ್ನು ಟೂರಿಸಂ ಹಬ್  ಮಾಡುವ ಉದ್ದೇಶವಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ತಿಳಿಸಿದ್ದಾರೆ.

ತಣ್ಣೀರು ಬಾವಿ ಬೀಚ್ ಅಭಿವೃದ್ಧಿಗೆ ಸರಕಾರದಿಂದ 7ಕೋಟಿ ರೂ ವಿನಿಯೋಗ ಮಾಡಲಾಗುವುದು.  ಪಣಂಬೂರು ಬೀಚನ್ನು ಒಂದು ವರ್ಷ ದೊಳಗೆ ಸ್ವಚ್ಛ ಬೀಚ್ ಆಗಿ (ಬ್ಲೂ ಪ್ಲ್ಯಾಗ್ ಬೀಚ್‌) ಅಭಿವೃದ್ಧಿ ಪಡಿಸ ಲಾಗುವುದು.ಕೇಂದ್ರ ಸರಕಾರದಿಂದ ಈ ನಿಟ್ಟಿನಲ್ಲಿ ಅನುದಾನ ದೊರೆಯಲಿದೆ. ಮಂಗಳೂರು ಪ್ರವಾಸೋ ದ್ಯಮ ಅಭಿವ್ರದ್ಧಿ ಗೆ ಪ್ರವಾಸೋದ್ಯಮ ಇಲಾಖೆಗೆ 18 ಎಕ್ರೆ ಜಮೀನು ನೀಡುವ ಯೋಜನೆ ಪ್ರಗತಿಯ ಲ್ಲಿದೆ. ಜಿಲ್ಲಾಡಳಿತ ಮತ್ತು ಕರಾವಳಿ ಉತ್ಸವ ಸಮಿತಿಯ ವತಿಯಿಂದ  ಜ.10 ರಿಂದ ಆರಂಭಗೊಂಡ ಕರಾವಳಿ ಉತ್ಸವ ಇಂದು ಬೀಚ್ ಉತ್ಸವದೊಂದಿಗೆ  ಪಣಂಬೂರು ಬೀಚ್ ನಲ್ಲಿ ಸಮಾರೋಪ ಗೊಂಡಿತು.

ಸಮಾರಂಭದಲ್ಲಿ ಕರಾವಳಿ ಗೌರವ ಪ್ರಶಸ್ತಿ ಯನ್ನು ಪತ್ರಕರ್ತ ಮನೋಹರ ಪ್ರಸಾದ್ ರವರಿಗೆ ಶಾಸಕ ಡಾ.ಭರತ್ ಶೆಟ್ಟಿ ನೀಡಿ ಗೌರವಿಸಿದರು.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ,ಜಿಲ್ಲಾ ಅಪರ ಜಿಲ್ಲಾಧಿಕಾರಿ ರೂಪಾ,ಜಿಲ್ಲಾ ಕನ್ನಡ  ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್  ಕಲ್ಕೂರ,ಕನ್ನಡ ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ರಾಜೇಶ್,ಮನಪಾ ಆಯುಕ್ತ ಅಜಿತ್ ಕುಮಾರ್ ಶಾನಾಡಿ, ಮೂಡಾ ಆಯುಕ್ತ ಶ್ರೀಕಾಂತ ರಾವ್ , ವಾರ್ತಾಧಿಕಾರಿ ಖಾದರ್ ಶಾ ,ಪತ್ರಕರ್ತರ ಸಂಘದ ಅಧ್ಯಕ್ಷ ಶ್ರಿನಿವಾಸ ನಾಯಕ್ ಇಂದಾಜೆ, ಪಣಂಬೂರು ಬೀಚ್  ಅಭಿವ್ರದ್ಧಿ ಸಮಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News