ವೈದ್ಯಕೀಯ ಶಿಕ್ಷಣಕ್ಕೆ ಪ್ರೋತ್ಸಾಹ : ಜಿಎಂಯು- ಆರ್‌ಸಿಎಸ್‌ಐ ಮಧ್ಯೆ ತಿಳುವಳಿಕಾ ಒಪ್ಪಂದ

Update: 2020-01-19 17:30 GMT

ಅಜ್ಮಾನ್, ಜ.19: ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಪರಸ್ಪರ ಸಹಭಾಗಿತ್ವಕ್ಕೆ ಉತ್ತೇಜನ ನೀಡುವ ಉದ್ದೇಶದ ತಿಳುವಳಿಕಾ ಪತ್ರಕ್ಕೆ ಅಜ್ಮಾನ್‌ನ ಗಲ್ಪ್ ಮೆಡಿಕಲ್ ಯುನಿವರ್ಸಿಟಿ(ಜಿಎಂಯು) ಮತ್ತು ಬಹ್ರೇನ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್, ಐರ್‌ಲ್ಯಾಂಡ್ (ಆರ್‌ಸಿಎಸ್‌ಐ) ಸಹಿ ಹಾಕಿವೆ.

ಜ. 8ರಂದು ನಡೆದ ಕಾರ್ಯಕ್ರಮದಲ್ಲಿ ಜಿಎಂಯುನ ಕುಲಪತಿ ಮತ್ತು ಪ್ರೊ. ಹೊಸ್ಸಾಂ ಹಮ್ದಿ ಹಾಗೂ ಆರ್‌ಸಿಎಸ್‌ಐನ ಅಧ್ಯಕ್ಷ ಸಮೀರ್ ಒಟೂಮ್ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಒಪ್ಪಂದದಿಂದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಹಲವು ಅವಕಾಶಗಳು ಮುಕ್ತವಾಗಲಿದೆ ಎಂದು ಪ್ರೊ ಹೊಸ್ಸಾಂ ಹಮ್ದಿ ಹೇಳಿದ್ದಾರೆ. ಯುಎಇ, ಬಹ್ರೇನ್ ಮತ್ತು ಜಿಸಿಸಿ ದೇಶಗಳಿಗೆ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ನವೀನ ಶೋಧನೆಗಳ ಪ್ರಯೋಜನ ಒದಗಿಸುವಲ್ಲಿ ಎರಡೂ ಸಂಸ್ಥೆಗಳು ಒಂದೇ ಧೋರಣೆ ಹಾಗೂ ದೃಷ್ಟಿಕೋನವನ್ನು ಹೊಂದಿವೆ. ಈ ಒಪ್ಪಂದದಿಂದ ಎರಡೂ ಸಂಸ್ಥೆಗಳಿಗಷ್ಟೇ ಅಲ್ಲ ಸಂಪೂರ್ಣ ವಲಯಕ್ಕೇ ಪ್ರಯೋಜನವಾಗಲಿದೆ ಎಂದವರು ಹೇಳಿದರು.

ಇದೇ ಸಂದರ್ಭ ಮಾತನಾಡಿದ ಪ್ರೊ. ಸಮೀರ್ ಒಟೂಮ್, ಈ ಒಪ್ಪಂದವು ಪರೀಕ್ಷಕರ ವಿನಿಮಯ, ಜಂಟಿ ಸಂಶೋಧನೆ ಮತ್ತು ಕ್ಲಿನಿಕಲ್ ಇಲೆಕ್ಟಿವ್ಸ್- ಎಂಬ ಮೂರು ಅಂಶಗಳತ್ತ ಪ್ರಮುಖವಾಗಿ ಆದ್ಯತೆ ನೀಡಲಿದೆ. ಜಿಎಂಯುವಿನಲ್ಲಿರುವ ಸಂಶೋಧನಾ ಸೌಲಭ್ಯದಿಂದ ನಾವು ಪ್ರಭಾವಿತರಾಗಿದ್ದೇವೆ ಎಂದು ಹೇಳಿದರು.

ಜಿಎಂಯುವಿನಲ್ಲಿರುವ ತಂತ್ರಜ್ಞಾನ ಆಧಾರಿತ ತರಬೇತಿ ವ್ಯವಸ್ಥೆ, ವರ್ಚುವಲ್ ಪೇಷಂಟ್ ಲರ್ನಿಂಗ್ ವ್ಯವಸ್ಥೆ ಮುಂತಾದ ಸೌಲಭ್ಯಗಳ ಬಗ್ಗೆ ಆರ್‌ಸಿಎಸ್‌ಐನ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News