ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ರಕ್ತದಾನ ಶಿಬಿರ

Update: 2020-01-20 11:42 GMT

ಮಂಗಳೂರು : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ವತಿಯಿಂದ ಜಿಲ್ಲೆಯಾದ್ಯಂತ ರಕ್ತದ ಕೊರತೆಯನ್ನು ನೀಗಿಸಲು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಯಶಸ್ವೀ ಮೂರು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಒಟ್ಟು 162 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಕರಾಯ, ಉಪ್ಪಿನಂಗಡಿ : ಹೆಲ್ಪ್ ಲೈನ್ ಗ್ರೂಪ್ ಕರಾಯ ಹಾಗೂ ಕೋಟಿ ಚೆನ್ನಯ್ಯ ಫ್ರೆಂಡ್ಸ್ ಕ್ಲಬ್ ಮರಿಪಾದೆ ಕಲ್ಲೇರಿ ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಉಪ್ಪಿನಂಗಡಿಯ ಕರಾಯದ ತಾಜ್ ಕಾಂಪ್ಲೆಕ್ಸ್ ನಲ್ಲಿ ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ಒಟ್ಟು 54 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ಹೆಲ್ಪ್ ಲೈನ್ ಕರಾಯ ಗ್ರೂಪಿನ ಅಧ್ಯಕ್ಷ  ಅಬ್ದುಲ್ ಸಮದ್ ಡಿ.ಕೆ  ಅಧ್ಯಕ್ಷತೆಯಲ್ಲಿ  ಕೆ.ಎಸ್‌. ಹೈದರ್ ದಾರಿಮಿ ದುವಾಶೀರ್ವಚನದೊಂದಿಗೆ ಬದ್ರಿಯಾ ಜುಮಾ ಮಸ್ಜಿದ್ ಕರಾಯ ಇದರ ಅಧ್ಯಕ್ಷ ಶಾಹುಲ್ ಹಮೀದ್ ಉದ್ಘಾಟನೆಗೈದರು. ಹಾರಿಸ್ ಕೌಸರಿ ಪ್ರಾಸ್ತಾವಿಕ ಭಾಷಣ ಮಾಡಿದರು.

ವೇದಿಕೆಯಲ್ಲಿ ಶ್ರೀಜಯ ವಿಕ್ರಮ, ಶೇಕಂಞಿ ಕರಾಯ, ಕಿಶೋರ್ ಕುಮಾರ್ ಪಂಜಿಕುಡೇಲ್, ಜಯರಾಮ ಸಾಲಿಯಾನ್, ತಾಜುದ್ದೀನ್, ಅಯ್ಯೂಬ್ ಡಿ.ಕೆ.,ನವೀನ್ ಕುಮಾರ್, ಅನಂತ ಕೃಷ್ಣ ಕುದ್ಮಣ್ಣಾಯ, ಶಿಬಬಾಲ್, ಮಹಲಿಂಗ ಕೆ, ವಿಲಿಯಂ ಲೋಬೋ, ಅಬ್ದುಲ್ ರಹಿಮಾನ್, ಅನ್ಸಾರ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ನಿರ್ವಾಹಕರಾದ ಶಾಫಿ ಮಾಣಿ, ರಝ್ವೀನ್ ಉಪಸ್ಥಿತರಿದ್ದರು.

ಕೆ.ಎಮ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ರವರು ಸ್ವಾಗತಿಸಿ, ಅಬ್ದುಲ್ ಫೈಝಿ ವಂದಿಸಿದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಸಹಕರಿಸಿದರು.

ಉಳಾಯಿ ಬೆಟ್ಟು, ಮಂಗಳೂರು : UBT ಹೆಲ್ಪ್ ಗೈಸ್ ಉಳಾಯಿಬೆಟ್ಟು ಜಂಟಿ ಆಶ್ರಯದಲ್ಲಿ ಎ ಜೆ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಉಳಾಯಿಬೆಟ್ಟುವಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ಒಟ್ಟು 55 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ವೇದಿಕೆಯಲ್ಲಿ SDMC ಅಧ್ಯಕ್ಷ ಅಬ್ದುಲ್ ಕುಂಞಿ, UBT ಹೆಲ್ಪ್ ಗೈಸ್ ಇದರ ಪ್ರಧಾನ ಕಾರ್ಯದರ್ಶಿ ಇಸಾಕ್ , ಪಂಚಾಯತ್ ಸದಸ್ಯರಾದ ಅಬ್ದುಲ್ ರಹ್ಮಾನ್, ಶಾಲಾ ಮುಖ್ಯೋಪಾಧ್ಯಾಯರಾದ ಚೇತನ್ ಕೊಪ್ಪ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಸಮೀರ್ ಉಳಾಯಿಬೆಟ್ಟು, ಅಝರ್ ಉಳಾಯಿಬೆಟ್ಟು, ಇಮ್ರಾನ್ ಬೈತಾರ್ ಮತ್ತು ಮನ್ಸೂರ್ ಉಳಾಯಿಬೆಟ್ಟು ಉಪಸ್ಥಿತರಿದ್ದರು.

ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಎ ಜೆ ಆಸ್ಪತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ UBT ಹೆಲ್ಪ್ ಗೈಸ್ ಸದಸ್ಯರು ಸಹಕರಿಸಿದರು.

ಅಡ್ಡೂರು, ಮಂಗಳೂರು: ವೆನ್ಲಾಕ್ ಜಿಲ್ಲಾ ಆಸತ್ರೆ ಮಂಗಳೂರು ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಅಡ್ಡೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಒಟ್ಟು 53 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಇಮ್ರಾನ್ ಅಡ್ಡೂರು, ಮೆಹತಾಬ್ ಕೈಕಂಬ ಮತ್ತು ಇರ್ಷಾದ್ ಅಡ್ಡೂರು ಉಪಸ್ಥಿತರಿದ್ದರು. ರಕ್ತ ಸಂಗ್ರಹಿಸುವಲ್ಲಿ ವೆನ್ಲಾಕ್ ಜಿಲ್ಲಾ ಆಸತ್ರೆ ಮಂಗಳೂರು ಇದರ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News