ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಸ್ಪೋಟಕ' ವಸ್ತು ಪತ್ತೆ : ಶಂಕಿತ ವ್ಯಕ್ತಿ, ಆಟೊ ರಿಕ್ಷಾ ಚಿತ್ರ ಬಿಡುಗಡೆ

Update: 2020-01-20 13:02 GMT

ಮಂಗಳೂರು, ಜ 20 : ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಪತ್ತೆಯಾಗಿದ್ದ ಅನುಮಾನಾಸ್ಪದ ಬ್ಯಾಗ್ ನಲ್ಲಿದ್ದ 'ಸ್ಪೋಟಕ' ವಸ್ತುವನ್ನು ಆಟೊ ರಿಕ್ಷಾದಲ್ಲಿ ಬಂದು ಇಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸ್ ಕಮಿಷನರ್ ಡಾ. ಹರ್ಷ ಬಿಡುಗಡೆ ಮಾಡಿದ್ದಾರೆ.

'ಸ್ಪೋಟಕ' ವಸ್ತುವನ್ನು ಪಕ್ಕದ ಕೆಂಜಾರ್ ನ ಗದ್ದೆಯಲ್ಲಿ ಬಾಂಬ್ ಪಡೆ ಉಸ್ತುವಾರಿಯಲ್ಲಿ ಸಂಜೆ ಸ್ಪೋಟಿಸಲಾಗಿದೆ. ಆದರೆ ಪತ್ತೆಯಾದ ಬ್ಯಾಗ್ ನಲ್ಲಿ ಇದ್ದ ವಸ್ತು ಯಾವುದು ಎಂದು ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಸ್ಪೋಟಕದಂತಹ ವಸ್ತು ಎಂದು ಮಾತ್ರ ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಶಂಕಿತ ವ್ಯಕ್ತಿ ಆಟೊದಲ್ಲಿ ಬಂದು ಬ್ಯಾಗ್‌ ಇಟ್ಟು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News