×
Ad

ಗ್ರಾಪಂಗಳು ಸ್ವಾವಲಂಬಿಯಾಗಬೇಕು: ರಘುಪತಿ ಭಟ್

Update: 2020-01-20 19:27 IST

ಉಡುಪಿ, ಜ.20: ಗ್ರಾಪಂಗಳು ಸ್ವಾವಲಂಬಿ ಮತ್ತು ಸದೃಢಗೊಳ್ಳುವ ಉದ್ದೇಶದಿಂದ ಕೇಂದ್ರ ಸರಕಾರ 14ನೇ ಹಣಕಾಸು ನಿಧಿಯಡಿ ನೇರವಾಗಿ ಪಂಚಾಯತ್‌ಗಳಿಗೆ ಅನುದಾನ ಬಿಡುಗಡೆ ಮಾಡುತ್ತಿದ್ದು, ಪಂಚಾಯತ್‌ಗಳು ಇದರ ಸಮಗ್ರ ಪ್ರಯೋಜನ ಪಡೆಯಬೇಕು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಸೋಮವಾರ ಸುಮಾರು 36.30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಲ್ಯಾಣಪುರ ಗ್ರಾಮ ಪಂಚಾಯತ್ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸೋಮವಾರ ಸುಮಾರು 36.30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಲ್ಯಾಣಪುರ ಗ್ರಾಮ ಪಂಚಾಯತ್ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕೇಂದ್ರ ಸರ್ಕಾರ ನೀಡುವ ಅನುದಾನದೊಂದಿಗೆ ಪಂಚಾಯತ್‌ಗೆ ದೊರೆತ ಮರಳು ರಾಯಧನ ಮತ್ತು ಪಂಚಾಯತ್‌ನ ಆದಾಯದಿಂದ ಸ್ವಂತ ಕಟ್ಟಡ ನಿರ್ಮಿಸಿಕೊಂಡಿರುವ ಕಲ್ಯಾಣಪುರ ಗ್ರಾಪಂ ಈ ನಿಟ್ಟಿನಲ್ಲಿ ಉಳಿದ ಗ್ರಾಪಂ ಗಳಿಗೆ ಮಾದರಿಯಾಗಿದೆ. ಈ ಕಟ್ಟಡಕ್ಕೆ ಮೇಲ್ಛಾವಣಿಯಲ್ಲಿ ಸಭಾಂಗಣ ನಿರ್ಮಿಸಲು ಶಾಸಕರ ನಿಧಿಯಿಂದ ಅಗತ್ಯ ಅನುದಾನ ನೀಡಲಾಗುವುದು ಎಂದು ಶಾಸಕರು ತಿಳಿಸಿದರು.

ಗ್ರಾಪಂಗಳು ಎದುರಿಸುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆ ಕುರಿತಂತೆ ಮಾತನಾಡಿದ ರಘುಪತಿ ಭಟ್, ಪ್ರಸ್ತುತ ಉಡುಪಿಯ ಕರ್ವಾಲುನಲ್ಲಿ ಸಂಗ್ರಹಗೊಂಡಿರುವ ತ್ಯಾಜ್ಯವನ್ನು ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತಂತೆ ವಿಸ್ತೃತ ಯೋಜನಾ ವರದಿ ತಯಾರಿಸಿ ಅದನ್ನು ಅನುಷ್ಠಾನಗೊಳಿಸಲು ಟೆಂಡರ್ ಕರೆದಿದ್ದು, ಇದಕ್ಕಾಗಿ ಎರಡು ಕಂಪೆನಿಗಳು ಆಸಕ್ತಿ ತೋರಿಸಿವೆ ಎಂದವರು ವಿವರಿಸಿದರು.

ಕರ್ವಾಲಿನ ತ್ಯಾಜ್ಯ ವಿಲೇವಾರಿಯಾದ ನಂತರ ಉಡುಪಿ ಕ್ಷೇತ್ರದ ಗ್ರಾಮ ಪಂಚಾಯತ್‌ಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪ್ರತಿ ಟನ್‌ಗೆ ದರ ನಿಗದಿ ಮಾಡಿ, ಕರ್ವಾಲಿನಲ್ಲಿಯೇ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಚಿಂತನೆ ಇದೆ. ಗ್ರಾಪಂ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಾರಾಹಿಯ ನೀರನ್ನು ಭರತ್ಕಲ್‌ನಲ್ಲಿ ಶುದ್ಧೀಕರಿಸಿ, ಉಡುಪಿಗೆ ತರುವ ಯೋಜನೆ ಇದ್ದು, ಉಡುಪಿಗೆ ಬರುವ ಮಾರ್ಗದಲ್ಲಿರುವ ಉಡುಪಿ ಕ್ಷೇತ್ರದ 19 ಗ್ರಾಪಂಗಳಿಗೆ ಇದರಿಂದ ನೀರು ನೀಡಲಾಗುವುದು ಎಂದು ಹೇಳಿದರು.

ಕಲ್ಯಾಣಪುರ ಗ್ರಾಪಂ ಅಧ್ಯಕ್ಷೆ ಪುಷ್ಪಎಸ್.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯರಾದ ಧನಂಜಯ ಕುಂದರ್, ದಿನಕರ ಹೇರೂರು, ಸುಲೋಚನಾ, ಕೆಮ್ಮಣ್ಣು ಗ್ರಾಪಂ ಅಧ್ಯಕ್ಷೆ ಫೌಜಿಯಾ ಸಾದಿಕ್, ಕಲ್ಯಾಣಪುರ ಗ್ರಾಪಂ ಉಪಾಧ್ಯಕ್ಷೆ ಲಿಲ್ಲಿ, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ಕಲ್ಯಾಣಪುರ ಗ್ರಾಂನ ಸದಸ್ಯರು ಉಪಸ್ಥಿತರಿದ್ದರು.

ಕಲ್ಯಾಣಪುರ ಗ್ರಾಪಂ ಅ್ಯಕ್ಷೆಪುಷ್ಪಎಸ್.ಕೋಟ್ಯಾನ್‌ಅ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮ್ವರಾಜ್,ಜಿಪಂಸದಸ್ಯಜನಾರ್ದನತೋನ್ಸೆ,ತಾಪಂಸದಸ್ಯರಾದನಂಜಯ ಕುಂದರ್, ದಿನಕರ ಹೇರೂರು, ಸುಲೋಚನಾ, ಕೆಮ್ಮಣ್ಣು ಗ್ರಾಪಂ ಅ್ಯಕ್ಷೆಫೌಜಿಯಾಸಾದಿಕ್,ಕಲ್ಯಾಣಪುರಗ್ರಾಪಂಉಪ್ಯಾಕ್ಷೆ ಲಿಲ್ಲಿ, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ಕಲ್ಯಾಣಪುರ ಗ್ರಾಪಂನ ಸದಸ್ಯರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃಧ್ದಿ ಅಧಿಕಾರಿ ಸುರೇಶ್ ಸ್ವಾಗತಿಸಿ, ಸತೀಶ್ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News