ಟೂರಿಸ್ಟ್ ಗೈಡ್‌ಗೆ ಅರ್ಜಿ ಆಹ್ವಾನ

Update: 2020-01-20 14:34 GMT

ಉಡುಪಿ, ಜ.20: ಉಡುಪಿ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳಲ್ಲಿ ನುರಿತ ವಿವಿಧ ಭಾಷೆಯ (ಕನ್ನಡ, ಆಂಗ್ಲ, ಹಿಂದಿ ಹಾಗೂ ಇತರೆ) ಪ್ರವಾಸಿ ಗೈಡ್‌ಗಳ ಅವಶ್ಯಕತೆ ಇದ್ದು, ಇಂಥ ತಾಣಗಳಲ್ಲಿ ಟೂರಿಸ್ಟ್ ಗೈಡ್‌ಗಳಾಗಿ ಕಾರ್ಯ ನಿರ್ವಹಿಸಲು ಆಸಕ್ತರಾಗಿರುವ ದ್ವಿತೀಯ ಪಿಯುಸಿ ಮುಗಿಸಿರುವ ಅ್ಯರ್ಥಿ ಗಳಿಂದ ಪ್ರವಾಸಿ ಗೈಡ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಇಲಾಖೆಯಿಂದ ಆಯ್ಕೆಯಾದ ಅ್ಯರ್ಥಿಗಳಿಗೆ ಟೂರಿಸ್ಟ್ ಗೈಡ್ ತರಬೇತಿ ನೀಡಿ ಹಾಗೂ ಗುರುತಿನ ಚೀಟಿಯೊಂದಿಗೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು. ಆಸಕ್ತ ಅ್ಯರ್ಥಿಗಳು ಫೆ.10ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ರಜತಾದ್ರಿ ಜಿಲ್ಲಾಧಿಕಾರಿಗಳ ಸಂಕೀರ್ಣ, ಮಣಿಪಾಲ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2574868ನ್ನು ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News