ಮದುವೆ ಹಾಲ್‌ನಲ್ಲಿ ಬಾಲಕಿಯ ಸರ ಅಪರಹಣ

Update: 2020-01-20 16:24 GMT

ಶಿರ್ವ, ಜ.20: ಮದುವೆ ಹಾಲ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವು ಮಾಡಿರುವ ಘಟನೆ ಜ.19ರಂದು ಮಧ್ಯಾಹ್ನ ವೇಳೆ ಕಟ್ಟಿಂಗೇರಿ ಎಂಬಲ್ಲಿ ನಡೆದಿದೆ.

ಪೆರ್ಡೂರು ಹೊಸಂಗಡಿಯ ಪ್ರಕಾಶ ಹಾಂಡ ಎಂಬವರ ಮಗಳು ಪಿಯಾಲಿ(7) ಎಂಬಾಕೆ ಕಟ್ಟಿಂಗೇರಿ ಸನ್ ಶೈನ್ ಸಭಾಂಗಣದ ಊಟದ ಹಾಲಿನಲ್ಲಿರುವ ವಾಶ್‌ರೂಮಿನಲ್ಲಿ ಕೈತೊಳೆಯುತ್ತಿರುವಾಗ ಓರ್ವ ಅಪರಿಚಿತ ವ್ಯಕ್ತಿಯು ವಾಶ್ ರೂಮಿಗೆ ಬಂದನು. ಅಲ್ಲಿ ಆತ ಪಿಯಾಲಿಯನ್ನು ಅಲ್ಲಿಯೇ ಇದ್ದ ಟಾಯ್ಲೆಟ್ ಒಳಗೆ ಎಳೆದುಕೊಂಡು ಹೋಗಿ ಬಾಗಿಲು ಹಾಕಿ, ಆಕೆಯ ಕುತ್ತಿಗೆಯಲ್ಲಿದ್ದ 30 ಸಾವಿರ ರೂ. ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿ ಪರಾರಿಯಾದನು.

ನಂತರ ಆಕೆಯನ್ನು ಅದೇ ಟಾಯ್ಲೆಟ್ ರೂಮಿನಲ್ಲಿ ಇರಿಸಿ ಹೊರಗಡೆಯಿಂದ ಚಿಲಕ ಹಾಕಿ ಹೋಗಿರುವುದಾಗಿ ದೂರಲಾಗಿದೆ. ಈ ಅಪರಿಚಿತ ವ್ಯಕ್ತಿಯು ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದನು.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News