ಸಿಎ ಪರೀಕ್ಷೆಯಲ್ಲಿ ಸನಾ ಹಂಝ ತೇರ್ಗಡೆ : ಕರ್ನಾಟಕ ಕರಾವಳಿಯ ದ್ವಿತೀಯ ಮುಸ್ಲಿಂ ಯುವತಿ

Update: 2020-01-20 16:47 GMT

ಮಂಗಳೂರು, ಜ.20: ಕಳೆದ ವರ್ಷ ನವೆಂಬರ್‌ನಲ್ಲಿ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಸನಾ ಹಂಝ ತೇರ್ಗಡೆ ಹೊಂದಿದ್ದಾರೆ. ಆ ಮೂಲಕ ಸಿಎ ಪೂರೈಸಿದ ಕರ್ನಾಟಕ ಕರಾವಳಿಯ ದ್ವಿತೀಯ ಮುಸ್ಲಿಂ ಯುವತಿ ಎಂಬ ಹೆಗ್ಗಳಿಕೆಗೆ ಈಕೆ ಪಾತ್ರರಾಗಿದ್ದಾರೆ.

ನಗರದ ಜೆಪ್ಪು ಮಜಿಲ ನಿವಾಸಿಯಾಗಿರುವ ಹಂಝ ಟಿ.ಐ. ಮತ್ತು ರೇಶ್ಮಾ ದಂಪತಿಯ ಪುತ್ರಿಯಾಗಿರುವ ಈಕೆ ಪ್ರಥಮ ಹಂತದಲ್ಲೇ ಈ ಸಾಧನೆಗೈದಿದ್ದಾರೆ. ಈಕೆ ನಗರದ ಖ್ಯಾತ ನ್ಯಾಯವಾದಿ ಜೆ. ಪುತ್ತಬ್ಬ ಅವರ ಮೊಮ್ಮಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News