ಕಂಬಳ, ಕೃಷಿ ಸಂಸ್ಕೃತಿ ದರ್ಶನ : ಛಾಯಾಚಿತ್ರ- ವರ್ಣಚಿತ್ರ ಸ್ಪರ್ಧೆ

Update: 2020-01-20 16:55 GMT

ಮಂಗಳೂರು, ಜ.20: ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿಯಲ್ಲಿ ಜ.25ರಂದು ನಡೆಯುವ ‘ಮಂಗಳೂರು ಕಂಬಳ-2020’ರ ಪ್ರಯುಕ್ತ ಕಂಬಳ ಹಾಗೂ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಛಾಯಾಚಿತ್ರ ಮತ್ತು ವರ್ಣಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಆಯ್ಕೆಯಾದ ಛಾಯಾಚಿತ್ರ ಮತ್ತು ವರ್ಣಚಿತ್ರಗಳಿಗೆ ಪ್ರಥಮ, ದ್ವಿತಿಯ ಹಾಗೂ ಸಮಾಧಾನಕರ, ಪ್ರೋತ್ಸಾಹಕರ ಬಹುಮಾನ ಗಳನ್ನು ನೀಡಿ ಗೌರವಿಸಲಾಗುವುದು ಹಾಗೂ ಆಯ್ಕೆದಾರರ ಮನಗೆದ್ದ ಚಿತ್ರಗಳನ್ನು ಕಂಬಳದಲ್ಲಿ ಪ್ರದರ್ಶಿಸಲಾಗುವುದು.

ಛಾಯಾಚಿತ್ರ ಅಥವಾ ವರ್ಣಚಿತ್ರವನ್ನು ಜ.25ರ ಬೆಳಗ್ಗೆ 9ರೊಳಗಾಗಿ ಕಂಬಳದ ಕಚೇರಿಗೆ ತಲುಪಿಸಬಹುದು. ಕೋರಿಯರ್/ಅಂಚೆ ಮೂಲಕ ಕಳುಹಿಸುವವರು ಜ.24ರೊಳಗೆ ಕಳುಹಿಸಬೇಕು. ಛಾಯಾಚಿತ್ರವು 18ಘಿ12 ಇಂಚಿನದ್ದಾಗಿದ್ದು ಫ್ರೇಮ್ ಮಾಡಿರಬೇಕು. (ವರ್ಣಚಿತ್ರಗೆ ಗಾತ್ರದ ಮಿತಿ ಇಲ್ಲ) ಛಾಯಾಚಿತ್ರ ಅಥವಾ ವರ್ಣಚಿತ್ರದ ಹಿಂದೆ ಅದಕ್ಕೆ ಸೂಕ್ತವಾದ ಶೀರ್ಷಿಕೆ, ಹೆಸರು, ಊರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದಿರಬೇಕು. ಒಬ್ಬರು 1 ಛಾಯಾಚಿತ್ರ ಅಥವಾ ವರ್ಣಚಿತ್ರವನ್ನು ಮಾತ್ರ ಕಳುಹಿಸಬಹುದು. 1ಕ್ಕಿಂತ ಹೆಚ್ಚು ಹಾಗೂ ಇತರೆ ಯಾವುದೇ ಗ್ರಾತ್ರದ (ಛಾಯಾಚಿತ್ರಕ್ಕೆ ಮಾತ್ರ ಅನ್ವಯ) ಚಿತ್ರಗಳನ್ನು ಕಳುಹಿಸಿದಲ್ಲಿ ಅವರ ಯಾವ ಛಾಯಾಚಿತ್ರ ಅಥವಾ ವರ್ಣಚಿತ್ರಗಳನ್ನೂ ಪರಿಗಣಿಸಲಾಗುವುದಿಲ್ಲ.

ವಿಳಾಸ: ತರ್ಜನಿ ಕಮ್ಯುನಿಕೇಶನ್ಸ್ ಪ್ರೈ.ಲಿ, 1ನೆ ಮಹಡಿ, ರಾಮ ಭವನ ಕಾಂಪ್ಲೆಕ್ಸ್, ಕೊಡಿಯಾಲ್‌ಬೈಲ್, ಮಂಗಳೂರು- 575 003. ಮಾಹಿತಿಗೆ ಮೊ.ಸಂ: 8762612877ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News