ಕೃಷ್ಣ ಮೃಗ, ಜಿಂಕೆ ಕೊಂಬು ಅಕ್ರಮ ಸಾಗಾಟ: ಓರ್ವ ಸೆರೆ

Update: 2020-01-20 17:06 GMT

ಬಂಟ್ವಾಳ: ಅಳವಿನಂಚಿನಲ್ಲಿರುವ ವನ್ಯ ಜೀವಿಗಳಾದ ಕೃಷ್ಣ ಮೃಗ ಮತ್ತು ಜಿಂಕೆ ಮೃಗದ ಕೊಂಬುಗಳನ್ನು ಅಕ್ರಮವಾಗಿ ಸಾಗಾಟ ಮಾಡಿ  ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದಲ್ಲಿ ಓರ್ವ ನನ್ನು ವಳವೂರು ಎಂಬಲ್ಲಿ ಮಂಗಳೂರು ಸಿ.ಐ.ಡಿ.ಅರಣ್ಯ ಸಂಚಾರಿ ದಳದವರು ಮತ್ತು ಬಂಟ್ವಾಳ ಅರಣ್ಯ ಇಲಾಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಮಂಗಳೂರು ತಾಲೂಕಿನ ಕಂಕನಾಡಿ ಗ್ರಾಮದ ಉಜ್ಜೋಡಿ ನಿವಾಸಿ ದಿಲೀಪ್ ಕುಮಾರ್ (30)ಬಂಧಿತ ಆರೋಪಿ.

ಬಂಧಿತನಿಂದ ಲಕ್ಷಾಂತರ ರೂ ಮೌಲ್ಯದ ಕೃಷ್ಣ ಮೃಗದ ಎರಡು ಕೊಂಬುಗಳು ಹಾಗೂ ಜಿಂಕೆ ಮೃಗದ 4 ಕೊಂಬುಗಳು ಒಟ್ಟು 6 ಕೊಂಬುಗಳು ಮತ್ತು 3 ಲಕ್ಷ ಮೌಲ್ಯದ ಕಾರನ್ನು ವಸಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News