ಭಟ್ಕಳ: ಕುರ್ ಆನ್ ಕಂಠಪಾಠ ಮಾಡಿದ ಮರ್ಕಝಿ ಖಲಿಫಾ ಜಮಾಅತುಲ್ ಮುಸ್ಲಿಮೀನ್ ಚೀಫ್ ಖಾಝಿ

Update: 2020-01-20 17:13 GMT

ಭಟ್ಕಳ : ಇಲ್ಲಿನ ಖಲಿಫಾ ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ನ ಚೀಫ್ ಖಾಜಿ ಹಾಗೂ ಜಾಮಿಯಾ ಇಸ್ಲಾಮಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಮೌಲಾನ ಕ್ವಾಜಾ ಮುಈನುದ್ದಿನ್ ಅಕ್ರಮಿ ಮದನಿ, ನದ್ವಿ ತಮ್ಮ 53ನೆ ವಯಸ್ಸಿನಲ್ಲಿಯೂ ಸಂಪೂರ್ಣ ಕುರ್‍ಆನ್ ಗ್ರಂಥವನ್ನು ಕಂಠಪಾಠ ಮಾಡಿದ್ದು ಖಲಿಫಾ ಜಾಮಿಯಾ ಮಸೀದಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

ಕಠಿಣ ಪರಿಶ್ರಮದ ಮೂಲಕ ಕೇವಲ 8 ತಿಂಗಳಲ್ಲಿ ಕಂಠಸ್ಥಗೊಳಿಸಿದ ಇವರು ಆಲಿಮ್ ಪದವಿಯೊಂದಿಗೆ ‘ಹಾಫಿಝ್’ ಪದವಿ ಯನ್ನೂ ಪಡೆದುಕೊಂಡತಾಗಿದೆ.

ಈ ಸಂದರ್ಭದಲ್ಲಿ ನದ್ವತುಲ್ ಉಲೇಮಾದ ಲಖ್ನೋ ದ ವಿದ್ವಾಂಸ ಮೌಲಾನ ಬಿಲಾಲ್ ಹಸನಿ ನದ್ವಿ, ಜಮಾಅತುಲ್ ಮುಸ್ಲಿಮೀನ್ ಮುಖ್ಯ ಖಾಝಿ ಮೌಲಾನ ಇಕ್ಬಾಲ್ ಮುಲ್ಲಾ ನದ್ವಿ, ಸಾದಾ ಮೀರಾ ಸೇರಿದಂತೆ ಪ್ರಮುಖ ವಿದ್ವಾಂಸರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News