ಮೀಯಪದವು: ಶಿಕ್ಷಕಿಯ ಶಂಕಾಸ್ಪದ ಸಾವಿನ ತನಿಖೆಗೆ ಆಗ್ರಹಿಸಿ ಧರಣಿ

Update: 2020-01-21 06:05 GMT

ಮಂಜೇಶ್ವರ, ಜ.21: ಮೀಯಪದವು ವಿದ್ಯಾವರ್ಧಕ ಪ್ರೌಢಶಾಲೆಯ ಶಿಕ್ಷಕಿ ರೂಪಾಶ್ರೀ ಬಿ.ಕೆ. ಅವರ ಶಂಕಾಸ್ಪದ ಸಾವಿನ ಕುರಿತು ತನಿಖೆಗೆ ಆಗ್ರಹಿಸಿ ಮೀಂಜ ಜನಪರ ವೇದಿಕೆಯ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಶಾಲೆಯೆದುರು ಧರಣಿ ನಡೆಯಿತು.

ವಿದ್ಯಾವರ್ಧಕ ಪ್ರೌಢಶಾಲೆಯ ಎದುರು ಧರಣಿನಿರತ ವಿದ್ಯಾರ್ಥಿಗಳು, ಅವರ ಪೋಷಕರು ಶಿಕ್ಷಕಿಯ ಸಾವಿನ ಹಿಂದೆ ನಿಗೂಢತೆಯಿದೆ. ಅವರಿಗೆ ಶಾಲೆಯಲ್ಲಿ ಕಿರುಕುಳ ನೀಡುತ್ತಿದ್ದ ಶಿಕ್ಷಕರೊಬ್ಬರನ್ನು ವಜಾ ಮಾಡಬೇಕು, ಆತನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳ ಸಹಿತ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಧರಣಿನಿರತರು ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಶಾಲಾ ಆವರಣದೊಳಗೆ ನುಗ್ಗಲೆತ್ನಿಸಿದ ಧರಣಿನಿರತರನ್ನು ಪೊಲೀಸರು ತಡೆದರು.

ಜಯರಾಮ ಬಲ್ಲಂಗುಡೇಲು, ಕುಂಞಿ, ಶುಕೂರು, ವಹೀದ್, ದಯಾಕರ ಮಾಡ, ಅಲಿ ಮತ್ತಿತರರು ಧರಣಿಯ ನೇತೃತ್ವ ವಹಿಸಿದ್ದರು.

ಜ.16ರ ಅಪರಾಹ್ನದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಚಿಗುರುಪಾದೆ ನಿವಾಸಿ ರೂಪಾಶ್ರೀ ಬಿ.ಕೆ.(40) ಅವರ ಮೃತದೇಹ ಜ.18ರಂದು ಬೆಳಗ್ಗೆ ಪೆರುವಾಡ್ ಸಮುದ್ರ ತೀರದಲ್ಲಿ ಶಂಕಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News