ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ಪ್ರಕರಣ: ಎನ್‌ಎಸ್‌ಜಿ ಕಮಾಂಡೊಗಳಿಂದ ತಪಾಸಣೆ
Update: 2020-01-21 12:25 IST
ಮಂಗಳೂರು, ಜ.21: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಅನುಮಾನಾಸ್ಪದವಾಗಿ ಸ್ಫೋಟಕವಿದ್ದ ಬ್ಯಾಗ್ ಪತ್ತೆಯಾದ ಹಿನ್ನೆಲೆಯಲ್ಲಿ ಎನ್‌ಎಸ್‌ಜಿ ಕಮಾಂಡೊಗಳ ತಂಡ ಸೋಮವಾರ ಮಂಗಳೂರಿಗೆ ಆಗಮಿಸಿದೆ.
16 ಎನ್‌ಎಸ್‌ಜಿ ಕಮಾಂಡೊಗಳ ತಂಡವು ಸ್ಫೋಟಕ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿತು. ಹಾಗೂ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾದ ಸ್ಥಳಕ್ಕೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.
ಈ ನಡುವೆ ಸ್ಫೋಟಕಗಳನ್ನು ತುಂಬಿದ್ದ ಬ್ಯಾಗನ್ನು ವಿಮಾನ ನಿಲ್ದಾಣದಲ್ಲಿ ಸೋಮವಾರ ಇರಿಸಿದನೆನ್ನಲಾದ ಶಂಕಿತ ವ್ಯಕ್ತಿಯ ಭಾವಚಿತ್ರವನ್ನು ಪೊಲೀಸರು ಪೊಲೀಸರೂ ಬಿಡುಗಡೆಗೊಳಿಸಿದ್ದಾರೆ. ಆದರೆ ಆತನ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.