'ಟುಕ್ಡೇ ಟುಕ್ಡೇ' ಗ್ಯಾಂಗ್ ಬಗ್ಗೆ ಮಾಹಿತಿಯಿಲ್ಲ: ಆರ್ ಟಿಐಗೆ ಗೃಹ ಸಚಿವಾಲಯದ ಉತ್ತರ

Update: 2020-01-21 11:18 GMT

ಹೊಸದಿಲ್ಲಿ: "ದಿಲ್ಲಿಯ ಟುಕ್ಡೇ ಟುಕ್ಡೇ ಗ್ಯಾಂಗ್‍ಗೆ ಪಾಠ ಕಲಿಸುವ ಸಮಯ ಬಂದಿದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ತಿಂಗಳ ಹಿಂದೆ ದಿಲ್ಲಿಯಲ್ಲಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಕಾಂಗ್ರೆಸ್ ಹಾಗೂ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು  ಶಾ ಈ ಹೇಳಿಕೆ ನೀಡಿದ್ದರು. ಆದರೆ ಇದಾದ ಕೆಲವೇ ವಾರಗಳಲ್ಲಿ ಅಮಿತ್ ಶಾ ಅವರು ಮುಖ್ಯಸ್ಥರಾಗಿರುವ ಗೃಹ ವ್ಯವಹಾರಗಳ ಸಚಿವಾಲಯ ತನ್ನ ಆರ್‍ ಟಿಐ ಉತ್ತರವೊಂದರಲ್ಲಿ ``ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಟುಕ್ಡೇ ಟುಕ್ಡೇ ಗ್ಯಾಂಗ್‍ ನ ಯಾವುದೇ ಮಾಹಿತಿಯಿಲ್ಲ'' ಎಂದಿದೆ.

ಶಾ ಅವರು ದಿಲ್ಲಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರ ಮೂಲದ ಪತ್ರಕರ್ತ ಸಾಕೇತ್ ಗೋಖಲೆ ಅವರು ಆರ್‍  ಟಿಐ ಅರ್ಜಿ ಸಲ್ಲಿಸಿ ಟುಕ್ಡೇ ಟುಕ್ಡೇ ಗ್ಯಾಂಗ್ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದ್ದರು ಹಾಗೂ ಈ ಗ್ಯಾಂಗ್‍ನಲ್ಲಿರುವ ನಾಯಕರು ಹಾಗೂ ಸದಸ್ಯರ ಪಟ್ಟಿಯಿದೆಯೇ ಎಂದೂ ಪ್ರಶ್ನಿಸಿದ್ದರು.

ಆದರೆ ಈ ಆರ್‍ಟಿಐ ಅರ್ಜಿ ಓದಿ ದಂಗಾಗುವ ಸರದಿ ಸಚಿವಾಲಯದ್ದಾಗಿತ್ತು.

ಆಡಳಿತ ಬಿಜೆಪಿಯ ನೀತಿ ಹಾಗೂ ಸಿದ್ಧಾಂತಗಳನ್ನು ವಿರೋಧಿಸುವವರನ್ನು 'ಟುಕ್ಡೇ ಟುಕ್ಡೇ ಗ್ಯಾಂಗ್' ಎಂದು ಮೋದಿ, ಶಾ ಅವರಿಂದ ಹಿಡಿದು ಹಲವಾರು ಬಿಜೆಪಿ ನಾಯಕರು ಈ ಹಿಂದೆ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News