​ಜ.31-ಫೆ.1: ಶಕ್ತಿ ವಸತಿ ಶಾಲೆಯಲ್ಲಿ ‘ಶಕ್ತಿ ಫೆಸ್ಟ್ 2020’

Update: 2020-01-21 12:23 GMT

ಮಂಗಳೂರು, ಜ. 21: ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆಶ್ರಯದಲ್ಲಿ ಜನವರಿ 31 ಹಾಗೂ ಫೆಬ್ರವರಿ 1ರಂದು ಶಕ್ತಿ ಫೆಸ್ಟ್ 2020ನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ದ.ಕ. ಜಿಲ್ಲಾ ಮಟ್ಟದಲ್ಲಿ ನಡೆಯುವ ಈ ಅಂತರ್ ಶಾಲಾ ಸ್ಪರ್ಧೆಗಳು ಎರಡು ವರ್ಗ ಹಾಗೂ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ ಎಂದರು.

ವರ್ಗ 1ರ ವಿಭಾಗ 1 ತರಗತಿ 1 ಹಾಗೂ 2, ವಿಭಾಗ 2ರಲ್ಲಿ ತರಗತಿ 3 ಮತ್ತು ನಾಲ್ಕು, ವರ್ಗ 2ರ ವಿಭಾಗ ಮೂರರಲ್ಲಿ ತರಗತಿ 5ರಿಂದ 7 ಹಾಗೂ ವಿಭಾಗ 4ರಲ್ಲಿ ತರಗತಿ 8ರಿಂದ 10ನೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ವಿಭಾಗ 1 ಮತ್ತು 2ರಲ್ಲಿ ಕನ್ನಡ, ಇಂಗ್ಲಿಷ್ , ಹಿಂದಿ ಭಾಷೆಗಳಲ್ಲಿ ಹಾಡು, ನಟನೆ, ಕತೆ ಹೇಳುವುದು, ಚಿತ್ರಕಲೆ, ಬಣ್ಣ ಹಾಕುವುದು, ದೇಶಭಕ್ತಿ ಗೀತೆ, ಛದ್ಮವೇಷ ಸ್ಪರ್ಧೆಗಳು ನಡೆಯಲಿವೆ. ವಿಭಾಗ ಮೂರು ಮತ್ತು ನಾಲ್ಕರಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ ಭಾಷಣ ಸ್ಪರ್ಧೆ, ಜನಪದ ಹಾಡು (ಸಮೂಹ), ಚಿತ್ರಕಲೆ, ರಸಪ್ರಶ್ನೆ, ಸ್ಪೆಲ್ ಬಿ, ಹೂ ಜೋಡಣೆ, ಛದ್ಮವೇಷ, ಸಾಂಸ್ಕೃತಿಕ ವೈವಿಧ್ಯ, ದಾಸರ ಪದಗಳು (ಸಮೂಹ), ವಾದ್ಯ ಸಂಗೀತ, ಸಾಂಪ್ರದಾಯಿಕ ರಂಗೋಲಿ, ಜನಪದ ಕುಣಿತ (ಮೂಹ) ಸ್ಪರ್ಧೆಗಳು ನಡೆಯಲಿವೆ.

ವಿಜೇತರಿಗೆ ನಗದು ಬಹುಮಾನ, ಪ್ರಶಂಸಾ ಪತ್ರ ಹಾಗೂ ಅತ್ಯಧಿಕ ಅಂಕ ಗಳಿಸಿದ ಶಾಲೆಗಳಿಗೆ ಎರಡು ವರ್ಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಫಲಕಗಳನ್ನ ಉನೀಡಿ ಗೌರವಿಸಲಾಗುವುದು. ಜ. 28 ನೋಂದಣಿಗೆ ಕೊನೆಯ ದಿನವಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಆನ್‌ಲೈನ್ ಮೂಲಕವೂ ನೋಂದಣಿ ಮಾಡಬಹುದಾಗಿದೆ. ಶಾಲೆಯಿಂದ ನೋಂದಣಿ ಕಳುಹಿಸಬೇಕು. ನೇರವಾಗಿ ಬಂದರೂ ಅವಕಾಶ ಕಲ್ಪಿಸಲಾಗುಉದು. ಶಾಲೆಯ ತಂಡವೊಂದರಲ್ಲಿ 12 ಜನರಿಗೆ ಭಾಗವಹಿಸಲು ಅವಕಾಶವಿದ್ದು, ಶಾಲೆಯಿಂದ 20 ಮಂದಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಪ್ರಾಂಶುಪಾಲರಾದ ವಿದ್ಯಾ ಕಾಮತ್, ಅಭಿವೃದ್ದಿ ಅಧಿಕಾರಿ ಪ್ರಖ್ಯಾತ್ ರೈ, ಪ್ರಧಾನ ಸಲಹೆಗಾರ ರಮೇಕ್ ಕೆ. ಉಪಸ್ಥಿತರಿದ್ದರು.

‘‘ಶಕ್ತಿ ವಸತಿಯುತ ಶಾಲೆಯಲ್ಲಿ ಪಠ್ಯ ಕ್ರಮಕ್ಕೆ ಸಮಾನಾಂತರವಾಗಿ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತದೆ’’

-ಸಂಜಿತ್ ನಾಯ್ಕ, ಕಾರ್ಯದರ್ಶಿ, ಶಕ್ತಿ ವಸತಿಯುತ ಶಾಲೆ, ಶಕ್ತಿನಗರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News