ಸರಕಾರ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ: ಮಾಜಿ ಸಿಎಂ ಕುಮಾರಸ್ವಾಮಿ

Update: 2020-01-21 14:24 GMT

ಮಂಗಳೂರು, ಜ.21: ಸರಕಾರ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ. ಸಿಎಎ, ಎನ್ ಆರ್ ಸಿಯ ಬಗ್ಗೆ  ರಾಜ್ಯಾದ್ಯಂತ ಮನೆಗಳಿಗೆ ಅಭಿಯಾನ ನಡೆಸಲಾಗುವುದು. ಸಿಎಎ ವಿರುದ್ಧ ಮಂಗಳೂರಲ್ಲಿ ಹೋರಾಟ ತೀವ್ರಗೊಂಡಿದೆ. ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಭಯೋತ್ಪಾದನ ಕೃತ್ಯಗಳನ್ನು ಬೆಂಬಲಿಸಲಾಗುತ್ತಿದೆ. ಮೈತ್ರಿ ಸರ್ಕಾರ ಇದ್ದಾಗ ಸುವ್ಯವಸ್ಥೆ ಇತ್ತು ಕರಾವಳಿಯಲ್ಲಿ ಯಾವೂದೇ ಗಲಭೆ ಇರಲಿಲ್ಲ. ಬಿಜೆಪಿ ಅಧಿಕಾರಕ್ಕೇರಿದ ನಂತರ ಹಿಂಸೆಗಳು ಆಗುತ್ತಿವೆ. ಸಿಎಎ ಕಾನೂನು ಜಾರಿ‌ ಮಾಡಲು ಹೊರಟಾಗ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮಂಗಳೂರು ಗಲಭೆ ಕುರಿತು ಗೊಂದಲ ಸೃಷ್ಟಿಸಲಾಗಿದೆ

ನಿನ್ನೆ ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟ ಘಟನೆ ನಡೆದಿತ್ತು. ಅದೊಂದು ಅಣಕು ಕಾರ್ಯಾಚರಣೆಯ ಮಾದರಿಯಂತಿದೆ. ಈ ರೀತಿ ರಾಜ್ಯದಲ್ಲಿ ಆತಂಕ ಸೃಷ್ಟಿಸುವ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದರ ಸತ್ಯಾಸತ್ಯತೆ ಜನರಿಗೆ ತಕ್ಷಣ ಸರಕಾರ ತಿಳಿಸಬೇಕು. ಆದಷ್ಟು ಬೇಗನೇ ತನಿಖೆ ಮುಗಿಸಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ,ಅಬೂಬಕರ್ ನಾಟೆಕಲ್, ಎಂ.ಬಿ.ಸದಾಶಿವ, ಅಕ್ಷಿತ್  ಬಿ.ಎಂ.ಫಾರೂಕ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News