ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬಹುಮಾನ

Update: 2020-01-21 14:32 GMT

 ಕುಂದಾಪುರ, ಜ.21: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಇತ್ತೀಚೆಗೆ ಚೆನ್ನೈಯಲ್ಲಿ ಏರ್ಪಡಿಸಿದ್ದ 15ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಸ್ಪೀಡ್ ಅರಿತ್‌ಮ್ಯಾಟಿಕ್ ಸ್ಪರ್ಧೆಯಲ್ಲಿ ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಸಿ.ಬಿ.ಎಸ್.ಇ. ಇಲ್ಲಿನ 7ನೆ ತರಗತಿ ವಿದ್ಯಾರ್ಥಿನಿಯರಾದ ಹಫ್ಸಾ ಎರಡನೇ ವಿಭಾಗದ ಪರೀಕ್ಷೆಯಲ್ಲಿ ತೃತೀಯ ಮತ್ತು ಹಫೀಸಾ ಮೂರನೆ ವಿಭಾಗದ ಪರೀಕ್ಷೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಇವರನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರೆಹಮಾನ್ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪ್ರೊ. ಚಂದ್ರಶೇಖರ್ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಸಿ.ಬಿ.ಎಸ್.ಇ.ಯ ಮುಖ್ಯೋಪಾದ್ಯಾಯಿನಿ ಫಿರ್ದೋಜ್, ಸಂಯೋಜಕಿ ಅಶ್ವಿನಿ ಶೆಟ್ಟಿ ಹಾಗೂ ಹಾಜಿ. ಕೆ.ಮೊಹಿದ್ದೀನ್ ಬ್ಯಾರಿ, ಅನು ದಾನಿತ ಪ್ರೌಢಶಾಲೆಯ ಮುಖ್ಯೋಪಾದ್ಯಾಯಿನಿ ಜಯಂತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News