ಸರ್ವೋಚ್ಚ ನ್ಯಾಯಾಲಯದಲ್ಲಿ ಅಯೋಧ್ಯೆ ತೀರ್ಪಿನ ವಿರುದ್ಧ ಪರಿಹಾರಕ ಅರ್ಜಿ ಸಲ್ಲಿಕೆ

Update: 2020-01-21 14:36 GMT

ಹೊಸದಿಲ್ಲಿ,ಜ.21: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮಾರ್ಗವನ್ನು ಸುಗಮಗೊಳಿಸಿರುವ ಸರ್ವೋಚ್ಚ ನ್ಯಾಯಾಲಯದ 2019,ನ.9ರ ತೀರ್ಪಿನ ವಿರುದ್ಧ ಪರಿಹಾರಕ ಅರ್ಜಿಯನ್ನು ಸಲ್ಲಿಸಲಾಗಿದೆ.

ಉತ್ತರ ಪ್ರದೇಶದ ಪೀಸ್ ಪಾರ್ಟಿಯ ಅಧ್ಯಕ್ಷ ಮುಹಮ್ಮದ್ ಅಯೂಬ್ ಅವರು ಮಂಗಳವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ದಾಖಲಿಸಿದ್ದು,ತೀರ್ಪು ವಾಸ್ತವಾಂಶಗಳ ಬದಲು ವಿಶ್ವಾಸವನ್ನು ಆಧರಿಸಿರುವುದರಿಂದ ಅದನ್ನು ಪುನರ್‌ಪರಿಶೀಲಿಸುವಂತೆ ಕೋರಿದ್ದಾರೆ.

ಕಟ್ಟಡದ ಮೇಲಿನ ಹಕ್ಕು ವಿಶಿಷ್ಟ ಮತ್ತು ಅಡೆತಡೆಯಿಲ್ಲದ ಸ್ವಾಧೀನತೆಯ ಆಧಾರದಲ್ಲಿ ನಿರ್ಧಾರವಾಗಬೇಕು ಮತ್ತು ಇದಕ್ಕೆ ಸಾಕಷ್ಟು ಸಾಕ್ಷಾಧಾರಗಳಿರಬೇಕು. ಕಟ್ಟಡದ ಒಳಾವರಣ ಅಥವಾ ಹೊರಾವರಣ ತನ್ನ ನಿರಂತರ ಸ್ವಾಧೀನದಲ್ಲಿತ್ತು ಎನ್ನುವುದನ್ನು ಸಿದ್ಧಪಡಿಸಲು ಹಿಂದುಗಳಿಗೆ ಸಾಧ್ಯವಾಗಿಲ್ಲ ಎಂದು ಅಯೂಬ್ ಅರ್ಜಿಯಲ್ಲಿ ವಾದಿಸಿದ್ದಾರೆ. ಪೀಸ್ ಪಾರ್ಟಿಯು ಸರ್ವೋಚ್ಚ ನ್ಯಾಯಾಲಯದ ಅಯೋಧ್ಯೆ ತೀರ್ಪಿನ ಪುನರ್‌ಪರಿಶೀಲನೆಯನ್ನು ಕೋರಿ ಈ ಹಿಂದೆ ಅರ್ಜಿಯನ್ನು ಸಲ್ಲಿಸಿತ್ತು ಮತ್ತು ಅದನ್ನು ನ್ಯಾಯಾಲಯವು ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News