ದೇಶದ ಅತ್ಯಂತ ಮಲಿನ ನಗರ ಯಾವುದು ಗೊತ್ತಾ?

Update: 2020-01-21 14:44 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.21: ಗ್ರೀನ್ ಪೀಸ್ ಇಂಡಿಯಾ ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯಂತೆ ಜಾರ್ಖಂಡ್‌ನ ಝರಿಯಾ ಭಾರತದ ಅತ್ಯಂತ ಮಾಲಿನ್ಯಭರಿತ ನಗರವಾಗಿ ಮುಂದುವರಿದಿದೆ ಮತ್ತು ದಿಲ್ಲಿ ವಾಯು ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ ಕಿಂಚಿತ್ ಸಾಧನೆಯನ್ನು ಮಾಡಿದೆ.

ದಿಲ್ಲಿ ದೇಶದ 10ನೇ ಅತ್ಯಂತ ಮಾಲಿನ್ಯಯುಕ್ತ ನಗರವಾಗಿದೆ. ಕಳೆದ ವರ್ಷ ಅದು ಈ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿತ್ತು.

ಕಲ್ಲಿದ್ದಲು ಗಣಿಗಳು ಮತ್ತು ಕೈಗಾರಿಕೆಗಳಿಗಾಗಿ ಹೆಸರಾಗಿರುವ ಜಾರ್ಖಂಡ್‌ನ ಧನಬಾದ್ ಭಾರತದಲ್ಲಿ ಎರಡನೇ ಅತ್ಯಂತ ಮಾಲಿನ್ಯಭರಿತ ನಗರವಾಗಿದೆ. ವರದಿಯು ದೇಶಾದ್ಯಂತದ 287 ನಗರಗಳ ಪಾರ್ಟಿಕ್ಯುಲೇಟ್ ಮ್ಯಾಟರ್ 10 ದತ್ತಾಂಶಗಳ ವಿಶ್ಲೇಷಣೆಯನ್ನು ಆಧರಿಸಿದೆ.

ಮಿರೆರಾಮ್‌ನ ಲುಂಗ್ಲೀ ಅತ್ಯಂತ ಕಡಿಮೆ ಮಾಲಿನ್ಯಯುಕ್ತ ನಗರವಾಗಿದ್ದು,ಮೇಘಾಲಯದ ಡೌಕಿ ನಂತರದ ಸ್ಥಾನದಲ್ಲಿದೆ.10 ಅತ್ಯಂತ ಮಾಲಿನ್ಯಯುಕ್ತ ನಗರಗಳಲ್ಲಿ ನೊಯ್ಡಾ, ಗಾಝಿಯಾಬಾದ್, ಬರೇಲಿ, ಅಲಹಾಬಾದ್, ಮೊರಾದಾಬಾದ್ ಮತ್ತು ಫಿರೋಝಾಬಾದ್ ಉತ್ತರ ಪ್ರದೇಶಕ್ಕೆ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News