ಸಾವಯವ ಕೃಷಿ ಉತ್ಪನ್ನಗಳ ಗುಣಮಟ್ಟ ಹೆಚ್ಚಳಕ್ಕೆ ತರಬೇತಿ

Update: 2020-01-21 14:49 GMT

ಉಡುಪಿ, ಜ.21: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ತೆಂಗಿನ ಮರದ ಸ್ನೇಹಿತರು ಹಾಗೂ ಸಾವಯವ ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಳ ತರಬೇತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆಂಪೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇದೊಂದು ಚಿಂತನ ಮಂಥನ ಸಭೆ. ತಿಂಗಳಿಗೊಮ್ಮೆ ಆದರೂ ರೈತರ ಸಭೆ ಕರೆದು ಅವರ ಸಮಸ್ಯೆಯನ್ನು ಪರಿಹರಿಸಿ ಅವರನ್ನು ಹುರಿದುಂಬಿಸಿದರೆ ಸಾವಯವ ಸಂತೆಯನ್ನು ಮುಂದುವರಿಸಬಹುದು ಹಾಗೂ ಇದಕ್ಕೆ ಇಲಾಖೆಯಿಂದ ಬೇಕಾದ ಎಲ್ಲಾ ತಾಂತ್ರಿಕ ಸಹಾುವನ್ನು ಮಾಡುವುದಾಗಿ ತಿಳಿಸಿದರು.

ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆಂಪೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇದೊಂದು ಚಿಂತನ ಮಂಥನ ಸೆ.ತಿಂಗಳಿಗೊಮ್ಮೆಆದರೂರೈತರಸೆ ಕರೆದು ಅವರ ಸಮಸ್ಯೆಯನ್ನು ಪರಿಹರಿಸಿ ಅವರನ್ನು ಹುರಿದುಂಬಿಸಿದರೆ ಸಾವಯವ ಸಂತೆಯನ್ನು ಮುಂದುವರಿಸಬಹುದು ಹಾಗೂ ಇದಕ್ಕೆ ಇಲಾಖೆಯಿಂದ ಬೇಕಾದ ಎಲ್ಲಾ ತಾಂತ್ರಿಕ ಸಹಾಯವನ್ನು ಮಾಡುವು ದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ಮತ್ತು ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಯು.ಪಾಟೀಲ್ ಮಾತನಾಡಿ, ಸಾವಯವ ಉತ್ಪನ್ನ ಮಾಡುವುದರಲ್ಲಿ ನಮ್ಮ ದೇಶವೇ ಮುಂಚೂಣಿಯಲ್ಲಿದೆ. ಆದರೆ ಸಾವಯವ ಕೃಷಿ ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪಾದನೆ ಹೆಚ್ಚಿಸಲು ಸುಧಾರಿತ ಬೇಸಾಯ ಕ್ರಮದ ಅವಶ್ಯಕತೆ ಇದೆ. ಸಾವಯವ ಉತ್ಪನ್ನಗಳನ್ನು ಹೆಚ್ಚಿಸಲು ಯಾವ ಯಾವ ತಂತ್ರಜ್ಞಾನಗಳು ಲ್ಯವಿದೆ ಎಂಬ ಮಾಹಿತಿ ರೈತರಲ್ಲಿ ಇರಬೇಕಾಗಿದೆ ಎಂದರು.

ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲದ ಪ್ರಾಧ್ಯಾಪಕ ಮತ್ತು ವಿಭಾಗ ಮುಖ್ಯಸ್ಥ ಡಾ. ಲಕ್ಷ್ಮಣ್ ಮಾತನಾಡಿ, ತೆಂಗಿನ ಕಾಯಿಯಿಂದ ಸುಮಾರು 150ರಿಂದ 200 ವೌಲ್ಯವರ್ದನ ಉತ್ಪನ್ನಗಳನ್ನು ತಯಾರಿಸಬಹುದು ಹಾಗೂ ಮುಂದಿನ 21 ದಿನದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದರ ಪೂರ್ತಿ ಲಾಭವನ್ನು ಪಡೆದುಕೊಳ್ಳುವಂತೆ ರೈತರಿಗೆ ತಿಳಿಸಿದರು.

ದ.ಕ, ಚಿಕ್ಕಮಗಳೂರು ಮತ್ತು ಉಡುಪಿ ಪ್ರಾಂತೀಯ ಸಾವಯವ ಒಕ್ಕೂಟದ ನಿರ್ದೇಶಕ ದೇವದಾಸ್ ಹೆಬ್ಬಾರ್ ಮಾತನಾಡಿ, ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ ತೆಂಗಿನಕಾಯಿಗೆ ಬೇಡಿಕೆ ಜಾಸ್ತಿ ಇದೆ ಹಾಗೂ ಸಾವಯವ ಉತ್ಪನ್ನಗಳಿಗೂ ಬೇಡಿಕೆಯ ಕೊರತೆಯಿಲ್ಲ. ಆದರೆ ಅದನ್ನು ಮಾರುಕಟ್ಟೆಗೆ ತರುವಲ್ಲಿ ಸ್ವಲ್ಪ ಮಾಹಿತಿ ಪಡೆದುಕೊಂಡರೆ ಸಾವಯವ ಕೃಷಿಯಲ್ಲಿ ಯಶಸ್ಸು ಕಾಣಬಹುದು ಎಂದರು.

ಕೆವಿಕೆ ಬ್ರಹ್ಮಾವರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ. ಧನಂಜಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಶಂಕರ್ ಎಂ. ಮಾತನಾಡಿದರು. ಕೆವಿಕೆ ಬ್ರಹ್ಮಾವರದ ತೋಟಗಾರಿಕೆ ವಿಜ್ಞಾನಿ ಚೈತನ್ಯ ಎಚ್.ಎಸ್. ಸ್ವಾಗತಿಸಿ, ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ಎನ್.ಈ. ನವೀನ್ ನಿರೂಪಿಸಿದರು. ಕೀಟಶಾಸ್ತ್ರ ವಿಜ್ಞಾನಿ ಡಾ. ಸಚಿನ್ ಯು.ಎಸ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News