ಜ.22-26: ಬಿಗ್‌ ಬಝಾರ್‌ನಲ್ಲಿ ಶಾಪಿಂಗ್ ಉತ್ಸವ

Update: 2020-01-21 16:14 GMT

ಉಡುಪಿ, ಜ. 21: ದೇಶದ ಗಣರಾಜ್ಯೋತ್ಸವ ಪ್ರಯುಕ್ತ  ಜ.22ರಿಂದ 26ರವರೆಗೆ ಉಡುಪಿಯ ಬಿಗ್‌ ಬಝಾರ್‌ನಲ್ಲಿ ದೇಶದ ಅತ್ಯಂತ ದೊಡ್ಡ ಶಾಪಿಂಗ್ ಉತ್ಸವ ನಡೆಯಲಿದೆ. ಈ ಅವಧಿಯಲ್ಲಿ ದೇಶಾದ್ಯಂತ ಇರುವ 275 ಬಿಗ್ ಬಝಾರ್‌ನ ಜೆನ್ ನೆಕ್ಟ್ಸ್ ಮತ್ತು ಹೈಪರ್‌ಸಿಟಿ ಮಳಿಗೆಗಳಲ್ಲಿ ‘ಅತ್ಯಂತ ಕಡಿಮೆ ಬೆಲೆಯ 5 ದಿನಗಳು’ ನಡೆಯಲಿದೆ ಎಂದು ಬಿಗ್‌ ಬಝಾರ್‌ನ ಸ್ಟೋರ್ ಮ್ಯಾನೇಜರ್ ರಾಘವೇಂದ್ರ ತಿಳಿಸಿದ್ದಾರೆ.

ಬಿಗ್‌ ಬಝಾರ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ಫ್ಯಾಷನ್ ವಸ್ತುಗಳ ಮೇಲೆ ಶೇ.50ರಷ್ಟು ರಿಯಾಯಿತಿ, ಆಹಾರ ಹಾಗೂ ದಿನಸಿ ಪದಾರ್ಥಗಳ ಮೇಲೆ ಎರಡು ಕೊಳ್ಳಿ ಒಂದು ಉಚಿತ ಪಡೆಯಿರಿ ಕೊಡುಗೆ ಹಾಗೂ ರುಪೇ ಕಾರ್ಡ್‌ಗಳ ಮೇಲೆ ಹೆಚ್ಚುವರಿಯಾಗಿ ಶೇ.10 ರಿಯಾಯಿತಿ ದೊರೆಯಲಿದೆ ಎಂದರು.

ಈ ಐದು ದಿನಗಳಲ್ಲಿ ಬಿಗ್‌ ಬಝಾರ್‌ನಲ್ಲಿ ಶಾಪಿಂಗ್ ಹೊಸ ಅನುಭವ ವನ್ನು ನೀಡಲಿದೆ. ಆಹಾರ, ಫ್ಯಾಷನ್, ಹೋಮ್ ಫರ್ನಿಷಿಂಗ್, ಲಗೇಜ್, ಕಿಚನ್‌ವೇರ್ ಹಾಗೂ ದೈನಂದಿನ ಅಗತ್ಯ ವಸ್ತುಗಳ ಮೇಲೆ ಮೆಗಾ ಡೀಲ್‌ಗಳು, ಕಾಂಬೊ ಆಫರ್‌ಗಳು ಹಾಗೂ ರಿಯಾಯಿತಿಗಳು ದೊರೆಯಲಿವೆ ಎಂದರು.

ಹೋಮ್ ಕಿಚನ್ ಕಾಂಬೊ ಸೆಟ್‌ನಲ್ಲಿ 13,505 ರೂ. ಮೌಲ್ಯದ ವಸ್ತುಗಳು ಕೇವಲ 4,999ರೂ.ಗಳಿಗೆ ದೊರೆಯಲಿದೆ. 43 ಇಂಚಿನ 40,000ರೂ. ಮೌಲ್ಯದ ಕೊರ್ಯೊ ಟಿವಿ ಸೆಟ್ ಕೇವಲ 14,999ರೂ.ಗೆ ದೊರೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಹಾರ ವಿಭಾಗದ ಅಶೋಕ್, ಗೃಹೋಪಕರಣ ವಿಭಾಗದ ದೀಪಕ್ ಹಾಗೂ ಫ್ಯಾಫನ್ ವಿಭಾಗದ ಲತೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News