ಸಿಎಎ,ಎನ್‌ಆರ್‌ಸಿ,ಎನ್‌ಪಿಆರ್ ವಿರುದ್ಧ ಜಾಗೃತಿಗೆ ಕಾಂಗ್ರೆಸ್‌ನಿಂದ ಜನಸಂಪರ್ಕ ಕಾರ್ಯಕ್ರಮ

Update: 2020-01-21 15:52 GMT

ಹೊಸದಿಲ್ಲಿ,ಜ.21: ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್‌ಗೆ ಸಂಬಂಧಿಸಿದಂತೆ ಹಲವಾರು ರಾಜ್ಯ ಘಟಕಗಳು ಮತ್ತು ಚುನಾಯಿತ ಸದಸ್ಯರು ಸೇರಿದಂತೆ ಪಕ್ಷದ ನಾಯಕರಿಂದ ವಿಚಾರಣೆಗಳ ಮಹಾಪೂರವನ್ನೇ ಸ್ವೀಕರಿಸಿರುವ ಕಾಂಗ್ರೆಸ್‌ನ ಸಂಶೋಧನಾ ವಿಭಾಗವು ಈಗ ಈ ವಿಷಯಗಳ ಬಗ್ಗೆ ಪ್ರಶ್ನಾವಳಿ ಮತ್ತು ಉತ್ತರಗಳನ್ನು ಸಿದ್ಧಗೊಳಿಸಿದ್ದು, ಸಿಎಎ ಅನ್ನು ಬೆಂಬಲಿಸಿ ಬಿಜೆಪಿಯು ನಡೆಸುತ್ತಿರುವ ಪ್ರಚಾರದ ಮಾದರಿಯಲ್ಲಿ ಈ ಕಾನೂನುಗಳ ದುಷ್ಪರಿಣಾಮಗಳನ್ನು ಜನರಿಗೆ ವಿವರಿಸಲು ಮನೆ ಮನೆ ಸಂಪರ್ಕ ಅಭಿಯಾನವನ್ನು ಯೋಜಿಸಿದೆ.

ಸಿಎಎ ಕುರಿತು ಪ್ರತಿಪಕ್ಷವನ್ನು ಗುರಿಯಾಗಿಸಿಕೊಂಡು ಬಿಜೆಪಿಯು ಹಮ್ಮಿಕೊಂಡಿರುವ ಬೃಹತ್ ಪ್ರಚಾರ ಅಭಿಯಾನವು ಕಾಂಗ್ರೆಸ್‌ಗೆ ಚಿಂತೆಯನ್ನುಂಟು ಮಾಡಿತ್ತು ಹಾಗೂ ಬಿಜೆಪಿಯು ಸಿಎಎ ಕುರಿತು ಜನರಿಗೆ ಮನದಟ್ಟು ಮಾಡಿ ಬೆಂಬಲವನ್ನು ಕ್ರೋಡೀಕರಿಸುತ್ತಿರುವ ಬಗ್ಗೆ ರಾಜ್ಯ ಘಟಕಗಳು ಆತಂಕ ವ್ಯಕ್ತಪಡಿಸಿದ್ದವು.

ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ಮತ್ತು ಅವುಗಳ ನಡುವಿನ ನಂಟಿನ ಕುರಿತು ಗೊಂದಲಗಳಿರುವುದರಿಂದ ತಾವು ಜನರನ್ನು ತಲುಪುವ ಮುನ್ನ ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ಬಯಸಿರುವುದಾಗಿ ಹಲವಾರು ರಾಜ್ಯ ಕಾಂಗ್ರಸ್ ಘಟಕಗಳು ಕೇಂದ್ರ ನಾಯಕತ್ವಕ್ಕೆ ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News