ವಿಟ್ಲ: ಬಾವಿಗೆ ಬಿದ್ದ ವ್ಯಕ್ತಿ ಮೃತ್ಯು

Update: 2020-01-21 17:25 GMT

ವಿಟ್ಲ, ಜ. 21: ಸ್ನಾನಕ್ಕೆ ಹೋದ ವ್ಯಕ್ತಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲ ಪಡ್ನೂರು ಗ್ರಾಮದ ಪಿಲಿಂಜದಲ್ಲಿ ಮಂಗಳವಾರ ನಡೆದಿದೆ.

ವಿಟ್ಲ ಪಡ್ನೂರು ಪಿಲಿಂಜ ನಿವಾಸಿ ಸೋಮಪ್ಪ ಪೂಜಾರಿ (58) ಮೃತ ವ್ಯಕ್ತಿ. ಬೆಳಗ್ಗೆ ನಿತ್ಯ ಸ್ನಾನಕ್ಕೆಂದು ತೋಟದ ಬಾವಿಯ ಸಮೀಪ ಹೋಗುವ ಇವರು ಮನೆಗೆ ಮರಳಿ ಬಾರದ ಹಿನ್ನೆಲೆ ಮನೆಯವರು ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭ ಬಾವಿಗೆ ಹಾಕಿದ ಅಡಿಕೆಮರದ ತಡೆ ತುಂಡಾಗಿ ಬಿದ್ದಿರುವುದು ಕಂಡು ಬಂದಿದೆ. ಬಾವಿಯಲ್ಲಿ ಪರಿಶೀಲನೆ ನಡೆಸಿದಾಗ ದೇಹ ಪತ್ತೆಯಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News