×
Ad

ಭಟ್ಕಳ: ಚಿನ್ನಾಭರಣ ಕಳವು ಪ್ರಕರಣ; ಆರೋಪಿ ಸೆರೆ

Update: 2020-01-21 23:08 IST

ಭಟ್ಕಳ: ಹದಿನೈದು ದಿನಗಳ ಹಿಂದೆ ತಾಲ್ಲೂಕಿನ ಬೆಳಕೆ ಕಂಚಿಕೇರಿಯಲ್ಲಿ ನಾಗರಾಜ ಗಣಪತಿ ಹೆಗಡೆ ಇವರ ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಕಪಾಟಿನಲ್ಲಿದ್ದ  ನಗದು ಹಾಗೂ ಚಿನ್ನಾಭರಣ ಕಳುವು ಮಾಡಿದ್ದ ಆರೋಪಿಯೊಬ್ಬನನ್ನು ಭಟ್ಕಳ ಪೊಲೀಸರ ತಂಡ ಪತ್ತೆ ಹಚ್ಚಿ ಸೊತ್ತು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತನನ್ನು ಮೂಲತ: ಹೊನ್ನಾವರದ ಮಂಕಿಯ ಚರ್ಚವಾಡದ ಪಿಯದಾದ್ ಲೂಪಿಸ್ (28) ಎಂದು ಗುರುತಿಸಲಾಗಿದೆ. ಜ. 4 ರಂದು ಕಳವು ನಡೆದಿತ್ತು. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು ಪತ್ತೆ ಹಚ್ಚಿರುವ ತನಿಖಾ ತಂಡಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News