''ಎನ್‌ಪಿಆರ್‌ಗೆ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರಗಳ ಸಹಕಾರ ಇಲ್ಲ''

Update: 2020-01-22 04:18 GMT

ಹೊಸದಿಲ್ಲಿ, ಜ.22: ಕಾಂಗ್ರೆಸ್ ಆಡಳಿತವಿರುವ ರಾಜ್ಯ ಸರ್ಕಾರಗಳು ಕೇಂದ್ರದ ಉದ್ದೇಶಿತ ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟರ್ (ಎನ್‌ಪಿಆರ್)ಗೆ ಸಕರಿಸುವ ಸಾಧ್ಯತೆ ಇಲ್ಲ. ಇದಕ್ಕೆ ಅಗತ್ಯವಾದ ಸಮೀಕ್ಷೆಗಳಿಗೆ ಅಗತ್ಯ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರಗಳು ಕಲ್ಪಿಸಿಕೊಡುವುದಿಲ್ಲ.

ಎಪ್ರಿಲ್‌ನಲ್ಲಿ ಆರಂಭವಾಗುವ ಎನ್‌ಪಿಆರ್ ಸಮೀಕ್ಷೆಯನ್ನು ತಾನು ನಡೆಸುವುದಿಲ್ಲ ಎಂದು ಕೇರಳ ಈಗಾಗಲೇ ಸ್ಪಷ್ಟಪಡಿಸಿದೆ. ಇತರ ವಿರೋಧ ಪಕ್ಷಗಳು ಏನು ಮಾಡುತ್ತವೆ ಎಂಬ ಬಗ್ಗೆ ಕುತೂಹಲ ಇದೆ. ಕಾಂಗ್ರೆಸ್ ಪಕ್ಷ ಎನ್‌ಪಿಆರ್ ವಿರೋಧಿಸಿದ್ದು, ಎನ್‌ಪಿಆರ್ ಸಮೀಕ್ಷೆಗೆ ನೆರವಾಗದಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಪಕ್ಷ ಸೂಚನೆ ನೀಡಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.

ಈ ಸಮೀಕ್ಷೆಯನ್ನು ರಾಜ್ಯ ಸರ್ಕಾರಿ ಅಧಿಕಾರಿಗಳು ಮಾಡಬೇಕಿರುವುದರಿಂದ, ರಾಜ್ಯ ಸರ್ಕಾರಗಳು ದಾಖಲೆಯಲ್ಲಿ ಎನ್‌ಪಿಆರ್ ವಿರೋಧಿಸದಿದ್ದರೂ, ರಾಜ್ಯ ಸರ್ಕಾರಗಳು ಸಹಕರಿಸದಿದ್ದರೆ ರಾಜಕೀಯ ಉದ್ದೇಶವನ್ನು ಈಡೇರಿಸಬಹುದು. ಈ ಬಗ್ಗೆ ಪಕ್ಷ ಕೂಡಾ ಅಧಿಕೃತ ಹೇಳಿಕೆ ಅಥವಾ ನಿರ್ಣಯವನ್ನು ಬಿಡುಗಡೆ ಮಾಡದಿರಬಹುದು.ಆದರೆ ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಾಲ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, "2020ರ ಎಪ್ರಿಲ್ 1ರಿಂದ ಎನ್‌ಪಿಆರ್ ಸಮೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ. ಎನ್‌ಪಿಆರ್‌ಗೆ ಸಂಬಂಧಿಸಿದಂತೆ ಮನೆಮನೆ ಸಮೀಕ್ಷೆ ನಡೆಸಿದಾಗ ಮಾತ್ರ ಸಿಎಎ ಕಾರ್ಯರೂಪಕ್ಕೆ ಬರಲಿದೆ. ಎಪ್ರಿಲ್ 1ರಂದು ಅದು ಆರಂಭವಾಗಲಿದ್ದು, ಇಂದು ಅದು ಸಮಸ್ಯೆಯಲ್ಲ" ಎಂದು ಹಾರಿಕೆಯ ಉತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News