ಕೇಂದ್ರದ ಪ್ರತಿಕ್ರಿಯೆ ಆಲಿಸದೆ ಸಿಎಎಗೆ ತಡೆ ವಿಧಿಸಲ್ಲ: ಸುಪ್ರೀಂ ಕೋರ್ಟ್

Update: 2020-01-22 06:22 GMT

ಹೊಸದಿಲ್ಲಿ: ಪೌರತ್ವ ಕಾಯ್ದೆಯ ಕುರಿತ ಅರ್ಜಿಗಳ ಬಗ್ಗೆ ಕೇಂದ್ರ ಸರಕಾರದ ಪ್ರತಿಕ್ರಿಯೆಯನ್ನು ಆಲಿಸದೆ ತಡೆ ವಿಧಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್ , ಈ ಕುರಿತ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಸರಕಾರಕ್ಕೆ 4 ವಾರಗಳ ಕಾಲಾವಕಾಶ ನೀಡಿದೆ.

ಕೇಂದ್ರದ ಪ್ರತಿಕ್ರಿಯೆಯನ್ನು ಆಲಿಸದೆ ತಡೆ ವಿಧಿಸಲು ಸಾಧ್ಯವಿಲ್ಲ ಎಂದ ಕೋರ್ಟ್, ಮನವಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಎನ್ ಪಿಆರ್ ಎಪ್ರಿಲ್ ತಿಂಗಳಲ್ಲಿ ಆರಂಭವಾಗಲಿದೆ. ಹಲವು ರಾಜ್ಯಗಳು ದಾಖಲೆಗಳ ಸಂಗ್ರಹ ಆರಂಭಿಸಿದೆ. ಒಂದು ಬಾರಿ ಪೌರತ್ವ ನೀಡಿದರೆ ಹಿಂಪಡೆದುಕೊಳ್ಳಲಾಗದು. ಆದ್ದರಿಂದ ಎನ್ ಪಿಆರ್ ದಿನಾಂಕ ಮುಂದೂಡಬೇಕು ಎಂದು ಕಪಿಲ್ ಸಿಬಲ್ ಮನವಿ ಮಾಡಿದರು. ಮೂರು ತಿಂಗಳ ಕಾಲ ಈ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದವರು ಮನವಿ ಮಾಡಿದೆ.

2 ವಾರಗಳ ನಂತರ ಅಸ್ಸಾಂಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ

ಸಿಎಎ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಅಸ್ಸಾಂನ ಅರ್ಜಿದಾರರು ಸಿಎಎಯ ವಿಚಾರ ಮತ್ತು ಅಸ್ಸಾಂಗೆ ಸಂಬಂಧಿಸಿ ಸಿಎಎಯ ವಿಚಾರವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಇದಕ್ಕೊಪ್ಪಿದ ಸಿಜೆಐ 2 ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಹೇಳಿದರು.

ಸುಪ್ರೀಂ ನೋಟಿಸ್ ಗೆ ಪ್ರತಿಕ್ರಿಯಿಸಲು 6 ವಾರಗಳ ಕಾಲಾವಕಾಶವನ್ನು ಕೇಂದ್ರ ಸರಕಾರವು ಕೇಳಿದ್ದು, ಸರಕಾರಕ್ಕೆ 4 ವಾರಗಳ ಕಾಲಾವಕಾಶವನ್ನು ನೀಡಲಾಯಿತು.

ಸಿಎಎ ಕುರಿತ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಗಳು ನಡೆಸುವಂತಿಲ್ಲ: ಸುಪ್ರೀಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News