ಕಾಸರಗೋಡು ಜಿಲ್ಲಾಧಿಕಾರಿಗೆ ರಾಷ್ಟ್ರೀಯ ಪ್ರಶಸ್ತಿ

Update: 2020-01-22 07:57 GMT

ಕಾಸರಗೋಡು, ಜ.22: ಕಳೆದ (2019-20ನೇ) ಸಾಲಿನ ಇ-ಗವರ್ನೆನ್ಸ್ ಗಿರುವ ರಾಷ್ಟ್ರೀಯ ಪ್ರಶಸ್ತಿಗೆ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆಯ್ಕೆಯಾಗಿದ್ದಾರೆ.

ಕೇಂದ್ರ ಪರ್ಸನಲ್, ಪಬ್ಲಿಕ್ ಗ್ರೀವೆನ್ಸೆಸ್ ಆಂಡ್ ಪೆನ್ಶನ್ಸ್ ಮಂತ್ರಾಲಯ ಸಿಬ್ಬಂದಿ ಆಡಳಿತ ಪರಿಷ್ಕಾರ ಇಲಾಖೆ ಏರ್ಪಡಿಸಿರುವ ಪುರಸ್ಕಾರಕ್ಕೆ ಅವರು ಆಯ್ಕೆಗೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವದಲ್ಲಿ ವಿಶೇಷ ಚೇತನರಿಗಾಗಿ ಜಾರಿಗೊಳಿಸಿರುವ "ವೀ ಡಿಸರ್ವ್" ಯೋಜನೆಗಾಗಿ ಈ ಪುರಸ್ಕಾರ ಸಂದಿದೆ. ಇ-ಗವರ್ನೆನ್ಸ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಚಟುವಟಿಕೆ ನಡೆಸಿದ ಯೋಜನೆಗಾಗಿ ಚಿನ್ನದ ಪದಕ ಇವರಿಗೆ ಲಭಿಸಲಿದೆ.

ಫೆ.8ರಂದು ಮುಂಬಯಿಯಲ್ಲಿ ನಡೆಯುವ ಇ-ಗವರ್ನೆನ್ಸ್ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾಸರಗೋಡು ಜಿಲ್ಲೆಗೆ ಈ ಮೂಲಕ ಪ್ರಥಮ ಬಾರಿಗೆ ಈ ಪುರಸ್ಕಾರ ಲಭಿಸುತ್ತಿದೆ.

ಜಿಲ್ಲಾಧಿಕಾರಿಯನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News