"ಗಡ್ಡಧಾರಿ ವ್ಯಕ್ತಿ ಜತೆ ಸಿಎಎ ಬಗ್ಗೆ ಚರ್ಚಿಸಿ"; ಅಮಿತ್ ಶಾಗೆ ಸವಾಲೆಸೆದ ಒವೈಸಿ

Update: 2020-01-22 11:39 GMT

ಹೈದರಾಬಾದ್: ವಿವಾದಿತ ಪೌರತ್ವ ತಿದ್ದುಪಡಿ ಕಾಯಿದೆ ಕುರಿತಂತೆ ಚರ್ಚೆಗೆ ಬರುವಂತೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಹಾಗೂ ಅಖಿಲೇಶ್ ಯಾದವ್ ಗೆ ಸವಾಲೆಸೆದಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ ಒಂದು ಸವಾಲು ಹಾಕಿದ್ದಾರೆ.

"ಅವರ ಜತೆ ಏಕೆ ಚರ್ಚೆ? ನನ್ನ ಜತೆ ಚರ್ಚೆಗೆ ಬನ್ನಿ'' ಎಂದು  ತೆಲಂಗಾನದ ಕರೀಂನಗರದಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಮಾತನಾಡುತ್ತಾ ಒವೈಸಿ ಹೇಳಿದ್ದಾರೆ.

"ನೀವು ನನ್ನೊಂದಿಗೆ ಚರ್ಚೆ ನಡೆಸಬೇಕು. ನಾನಿಲ್ಲಿದ್ದೇನೆ. ಅವರ ಜತೆ ಏಕೆ  ಚರ್ಚೆ ? ಚರ್ಚೆಯು ಗಡ್ಡಧಾರಿ ವ್ಯಕ್ತಿಯ ಜತೆಗೆ ನಡೆಯಬೇಕು. ಅವರ ಜತೆ ನಾನು ಸಿಎಎ, ಎನ್‍ ಪಿಆರ್ ಕುರಿತಂತೆ ಚರ್ಚಿಸಬಲ್ಲೆ'' ಎಂದು ಒವೈಸಿ ಹೇಳಿದರು.

ಮಂಗಳವಾರ ಲಕ್ನೋದಲ್ಲಿ ಸಿಎಎ ಪರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಎಷ್ಟೇ ಪ್ರತಿಭಟನೆಗಳು ನಡೆದರೂ ಸಿಎಎ ಜಾರಿಗೊಳಿಸುವುದಾಗಿ ಘೋಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News