'ನಾಗರಿಕ ಸ್ವಾತಂತ್ರ್ಯಕ್ಕೆ ಅಡ್ಡಿ': ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 10 ಸ್ಥಾನಗಳಷ್ಟು ಕುಸಿತ ಕಂಡ ಭಾರತ

Update: 2020-01-22 14:23 GMT

ಹೊಸದಿಲ್ಲಿ: 'ತಾರತಮ್ಯಕಾರಿ ಪೌರತ್ವ ಕಾಯ್ದೆ', ಜಮ್ಮು ಕಾಶ್ಮೀರದ ಸದ್ಯದ ಪರಿಸ್ಥಿತಿ, ವಿವಾದಾತ್ಮಕ ಎನ್ ಆರ್ ಸಿ ಮತ್ತು 'ನಾಗರಿಕ ಸ್ವಾತಂತ್ರ್ಯಕ್ಕೆ ಅಡ್ಡಿ'ಯಿಂದಾಗಿ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತವು 10 ಸ್ಥಾನಗಳಷ್ಟು ಕುಸಿತ ಕಂಡಿದ್ದು, 51ನೆ ಸ್ಥಾನಕ್ಕೆ ಕುಸಿದಿದೆ.

ಸುದ್ದಿ ಹಾಗು ಸಾಮಾನ್ಯ ವ್ಯವಹಾರಗಳ ಪ್ರಕಟಣಾ ಸಂಸ್ಥೆ 'ದಿ ಇಕನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್' ತನ್ನ ವಾರ್ಷಿಕ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದೆ. ಈ ಪಟ್ಟಿಯಲ್ಲಿ 165 ದೇಶಗಳ ಪೈಕಿ ಭಾರತ 51ನೆ ಸ್ಥಾನದಲ್ಲಿದೆ. ಭಾರತವು 10ರಲ್ಲಿ 6.9 ಅಂಕಗಳನ್ನು ಗಳಿಸಿದೆ.

2017 ಮತ್ತು 2018ರಲ್ಲಿ ಭಾರತವು 7.23, 2016ರಲ್ಲಿ 7.81 ಅಂಗಳನ್ನು ಗಳಿಸಿತ್ತು. 2014ರಲ್ಲಿ ಅತೀ ಹೆಚ್ಚು ಅಂದರೆ 7.91 ಅಂಕಗಳನ್ನು ದೇಶವು ಗಳಿಸಿತ್ತು.

"ದೇಶದಲ್ಲಿ ನಾಗರಿಕ ಸ್ವಾತಂತ್ರ್ಯಗಳಿಗೆ ಅಡ್ಡಿಯೇ ಪ್ರಜಾಪ್ರಭುತ್ವದ ಹಿಂಜರಿತಕ್ಕೆ ಕಾರಣ" ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News