ಎಸ್‌ಐಒ ದ.ಕ.ಜಿಲ್ಲಾಧ್ಯಕ್ಷರಾಗಿ ಆಶೀರುದ್ದೀನ್ ಆಲಿಯಾ ಆಯ್ಕೆ

Update: 2020-01-22 14:55 GMT
ಆಶೀರುದ್ದೀನ್

ಮಂಗಳೂರು, ಜ.22: ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಸಂಘಟನೆಯಾದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್‌ಐಒ)ದ 2020ನೇ ಅವಧಿಗೆ ದ.ಕ.ಜಿಲ್ಲಾಧ್ಯಕ್ಷರಾಗಿ ಅಶೀರುದ್ದೀನ್ ಮಂಜನಾಡಿ ಆಯ್ಕೆಯಾಗಿದ್ದಾರೆ.

ಉಡುಪಿಯ ಹೂಡೆಯಲ್ಲಿರುವ ಸಾಲಿಹಾತ್ ಕಾಲೇಜಿನಲ್ಲಿ ನಡೆದ ವಲಯ ಮಟ್ಟದ ಎಸ್‌ಐಒ ಸದಸ್ಯರ ಸಭೆಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಶೀರುದ್ದೀನ್ ಆಯ್ಕೆ ಮಾಡಲಾಯಿತು.

ಕಾಸರಗೋಡಿನ ಆಲಿಯಾ ಇಂಟರ್ ನ್ಯಾಷನಲ್ ಅರಬಿಕ್ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಗಳಿಸುತ್ತಿದ್ದಾರೆ. ಮೇಲ್ತೆನೆ ಬ್ಯಾರಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ಅಶೀರನ ಕವನಗಳು’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನ ಉಸ್ಮಾನಿಯಾ ವಿವಿಯಲ್ಲಿ ನಡೆದ ಸೌತ್ ಇಂಡಿಯಾ ಹಿಸ್ಟರಿ ಕಾನ್ಫರೆನ್ಸ್ನಲ್ಲಿ ‘ತುಳುನಾಡಿನ ವೀರವನಿತೆ ರಾಣಿ ಅಬ್ಬಕ್ಕ’ರ ಕುರಿತು ಸಂಶೋಧನಾ ಪ್ರಬಂಧವನ್ನೂ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News