ಉಳ್ಳಾಲ: ಯುನಿವೆಫ್ ನಿಂದ ಸೀರತ್ ಸಮಾವೇಶ

Update: 2020-01-22 17:14 GMT

ಉಳ್ಳಾಲ: ಯುನಿವೆಫ್ಕರ್ನಾಟಕ 2019ರ ನ. 22 ರಿಂದ  2020ರ ಜ. 24 ರ ವರೆಗೆ "ಮಾನವ ಸಂಬಂಧಗಳು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ  ಬೃಹತ್ ಸೀರತ್ ಸಮಾವೇಶವು ಉಳ್ಳಾಲದ ನಗರಸಭೆ ಮೈದಾನದಲ್ಲಿ ಜರಗಿತು.

ಕೇಂದ್ರೀಯ ವಿಷಯದ ಮೇಲೆ ಮಾತಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಸಕ್ತ ಸನ್ನಿವೇಶಗಳ ಮೇಲೆ ಬೆಳಕು ಚೆಲ್ಲಿದರು. ಪ್ರವಾದಿ (ಸ) ರವರು ಅನುಭವಿಸಿದ ಬವಣೆಗಳ ಬಗ್ಗೆ ವಿವರಿಸಿದ ಅವರು ತಾಳ್ಮೆ ಮತ್ತು ಸಂಯಮ ಎಲ್ಲಾ ಕಾಲದಲ್ಲೂ ಇಸ್ಲಾಮಿನ ಆಯುಧವಾಗಿತ್ತು ಎಂದು ಹೇಳಿದರು.

ಕುದ್ರೋಳಿ ಶಾಖಾಧ್ಯಕ್ಷ ಸೈಫುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿಯಾನ ಸಹ ಸಂಚಾಲಕ ಸಯೀದ್ ಅಹ್ಮದ್ ಕಿರ್ ಅತ್ ಪಠಿಸಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಅಭಿಯಾನ ಸಂಚಾಲಕ ಅಬ್ದುಲ್ಲಾ ಪಾರೆ ಮತ್ತು ಉಳ್ಳಾಲ ಶಾಖಾ ಕಾರ್ಯದರ್ಶಿ ಸರ್ಫ್ರಾಝ್ ನವಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News