ಎಸ್ಸೆಸ್ಸೆಫ್ ಮೇಲಂಗಡಿ: ಜ. 24 ರಿಂದ ಮುಹಬ್ಬತೇ ಜೀಲಾನಿ ಕಾರ್ಯಕ್ರಮ

Update: 2020-01-22 18:06 GMT

 ಮೇಲಂಗಡಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಮತ್ತು ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ಮೇಲಂಗಡಿ, ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಮಹಬ್ಬತೇ ಜೀಲಾನಿ ನಸೀಹತ್ ಸಿಲ್‍ಸಿಲಾದ ಪ್ರಯುಕ್ತ ಜ.24 ರಿಂದ ಫೆ.2ರ ತನಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮ ಮೇಲಂಗಡಿಯಲ್ಲಿ ನಡೆಯಲಿದೆ.

ನಸೀಹತ್ ಸಿಲ್‍ಸಿಲಾ, ಬೃಹತ್ ಮುರ್ದಾ ಮಜ್ಲಿಸ್, ಮುಹ್ಯದ್ದೀನ್ ಮಾಲೆ ಆಲಾಪಣೆ, ಸೆಯ್ಯಿದ್ ಮದನಿ ಮೌಲಿದ್, ತಾಜುಲ್ ಉಲಮಾ ಮೌಲಿದ್, 2ನೇ ವಾರ್ಷಿಕ ಮಹ್ಳರತುಲ್ ಬದ್ರಿಯ್ಯಾ ಮತ್ತು 3ನೇ ವಾರ್ಷಿಕ ಜಲಾಲಿಯಾ ರಾತೀಬು ಮಜ್ಲಿಸ್ ಗೌರವಾನ್ವಿತ ಉಳ್ಳಾಲ ಖಾಝಿ ಅಸ್ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್‍ರವರ ದುಆ ಆಶೀರ್ವಾದದೊಂದಿಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News