ಸಿಎಎ ಬೆಂಬಲಿಸುವ ಜೆಡಿಯು ನಾಯಕರ ಹೇಳಿಕೆಗಳು ವೈಯಕ್ತಿಕ: ಬಿಹಾರ ಸಿಎಂ ನಿತೀಶ್ ಕುಮಾರ್

Update: 2020-01-23 16:22 GMT

ಪಾಟ್ನಾ, ಜ. 23: ಪೌರತ್ವ ತಿದ್ದುಪಡಿ ಕಾಯ್ದೆಗೆ ಜೆಡಿಯು ನಾಯಕರಾದ ಪ್ರಶಾಂತ್ ಕಿಶೋರ್ ಹಾಗೂ ಪವನ್ ವರ್ಮಾ ಅವರು ಬಹಿರಂಗ ವಿರೋಧ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ವರಿಷ್ಠ ನಿತೀಶ್ ಕುಮಾರ್, ‘‘ಇವರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಲು ಸ್ವತಂತ್ರರಾಗಿದ್ದಾರೆ. ಅವರು ಬಯಸಿದಲ್ಲಿಗೆ ಹೋಗಬಹುದಾಗಿದೆ. ಇದಕ್ಕೆ ನಮ್ಮ ಆಕ್ಷೇಪವಿಲ್ಲ’’ ಎಂದು ಹೇಳಿದ್ದಾರೆ.

   ಪಕ್ಷದ ಕೆಲವರ ವೈಯಕ್ತಿಕ ಹೇಳಿಕೆಗಳನ್ನು ಜೆಡಿಯು ಪಕ್ಷದ ಹೇಳಿಕೆಗಳೆಂಬ ನೆಲೆಯಲ್ಲಿ ನೋಡದಿರಿ. ಜೆಡಿಯು ದೃಢ ನಿಲುವಿನೊಂದಿಗೆ ಕೆಲಸ ಮಾಡುತ್ತದೆ. ಪಕ್ಷಕ್ಕೆ ಅದರದ್ದೇ ಆದ ಸ್ಪಷ್ಟ ನಿಲುವುಗಳಿವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ’’ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಅವರಿಗೆ ಏನಾದರೂ ಹೇಳಲು ಇಚ್ಚಿಸಿದರೆ, ಅವರು ಪಕ್ಷದೊಂದಿಗೆ ಆ ಬಗ್ಗೆ ರ್ಚಿಸಬೇಕು. ಅವರು ಎಲ್ಲಿಗೆ ಹೋಗಲು ಬಯಸುತ್ತಾರೊ ಅಲ್ಲಿಗೆ ಹೋಗಲಿ. ಅವರಿಗೆ ನನ್ನ ಶುಭ ಹಾರೈಕೆ ಇದೆ ಎಂದು ಅವರು ಹೇಳಿದ್ದಾರೆ. ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಪ್ರಶಾಂತ್ ಕಿಶೋರ್ ತನ್ನ ಭಿನ್ನಾಭಿಪ್ರಾಯವನ್ನು ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಜೆಡಿಯು ವಕ್ತಾರ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ವರ್ಮಾ ಕೂಡಾ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತನ್ನ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News