ಜಮ್ಮುಕಾಶ್ಮೀರದ ಸಾರ್ವಭೌಮತೆ ತಾತ್ಕಾಲಿಕ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ

Update: 2020-01-23 16:10 GMT

ಹೊಸದಿಲ್ಲಿ, ಜ. 23: ಜಮ್ಮು ಹಾಗೂ ಕಾಶ್ಮೀರದ ಸಾರ್ವಭೌಮತೆ ತಾತ್ಕಾಲಿಕ ಹಾಗೂ ಭಾರತೀಯ ರಾಜ್ಯಗಳ ಏಕೀಕರಣವು ಬಲವರ್ಧನೆಯನ್ನು ತೋರಿಸುತ್ತದೆ ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ವಿಧಿ 370ನ್ನು ಹಿಂಪಡೆಯುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಜಮ್ಮು ಹಾಗೂ ಕಾಶ್ಮೀರ ಭಾರತೀಯ ಒಕ್ಕೂಟಕ್ಕೆ ಸೇರುವ ಪ್ರಕ್ರಿಯೆ ಹೇಗೆ ನಡೆಯಿತು ಎಂದು ವಿವರಿಸಿದರು.

ಜಮ್ಮು ಹಾಗೂ ಕಾಶ್ಮೀರ ಭಾರತೀಯ ಒಕ್ಕೂಟಕ್ಕೆ ಪ್ರವೇಶಿಸಿರುವುದನ್ನು ಬದಲಾಯಿಸಲಾಗದು ಎಂದು ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಪ್ರಕರಣಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಹಾಗೂ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್, ಆರ್. ಸುಭಾಶ್ ರೆಡ್ಡಿ, ಬಿ.ಆರ್. ಗವಾಯಿ, ಸೂರ್ಯಕಾಂತ್ ಅವರನ್ನು ಒಳಗೊಂಡ ಐವರು ಸದಸ್ಯರ ಪೀಠ ನಡೆಸಿತು. ಜಮ್ಮು ಹಾಗೂ ಕಾಶ್ಮೀರದ ಸಾರ್ವಭೌಮತ್ವ ನಿಜವಾಗಿಯೂ ತಾತ್ಕಾಲಿಕ ಎಂದು ತೋರಿಸಲು ನಾನು ಬಯಸುತ್ತೇನೆ ಎಂದು ವೇಣುಗೋಪಾಲ್ ಹೇಳಿದರು. ರಾಜ್ಯದ ಇತಿಹಾಸವನ್ನು ಕೆದಕಿದ ಅಟಾರ್ನಿ ಜನರಲ್, ಅವರು ಅನೇಕ ಕಾರಣಗಳಿಗೆ ಭಿನ್ನವಾಗಲಿದ್ದಾರೆ. ಉದಾಹರಣೆಗೆ ಜಮ್ಮು ಹಾಗೂ ಕಾಶ್ಮೀರದ ಮಹಾರಾಜ ಪಾಕಿಸ್ತಾನದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News