ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಕೇರಳ ಮೂಲದ ಬಾಲಕನ ರಕ್ಷಣೆ

Update: 2020-01-23 16:28 GMT

 ಉಡುಪಿ, ಜ.23: ಕೇರಳದಿಂದ ಮುಂಬೈಗೆ ಹೋಗುವ ರೈಲಿನಲ್ಲಿ ಟಿಕೆಟ್ ರಹಿತನಾಗಿ ಪ್ರಯಾಣ ಬೆಳೆಸುತ್ತಿದ್ದ ಬಾಲಕ ನೊಬ್ಬನನ್ನು ರೈಲ್ವೆ ಅಧಿಕಾರಿಗಳು ವಿಚಾರಿಸಿದಾಗ ಆತನು ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದು, ಅದರಂತೆ ಉಡುಪಿಯ ರೈಲ್ವೆ ನಿಲ್ದಾಣದ ಸಿಆರ್‌ಪಿ ಘಟಕದ ವಶಕ್ಕೆ ಬಾಲಕನನ್ನು ನೀಡಲಾಗಿತ್ತು.

ಅಲ್ಲಿಂದ ಮಕ್ಕಳ ಸಹಾಯವಾಣಿಗೆ ದೂರು ಬಂದಿದ್ದು, ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಕ್ಷಣ ಸ್ಪಂದಿಸಿ ರೈಲ್ವೆ ನಿಲ್ದಾಣಕ್ಕೆ ತೆರಳಿ ಬಾಲಕನ ಯೋಗಕ್ಷೇಮ ವಿಚಾರಿಸಿ ಸಮಾಲೋಚನೆಗೆ ಒಳಪಡಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿ, ಅವರ ಆದೇಶದಂತೆ ತಾತ್ಕಾಲಿಕವಾಗಿ ಸಿಎಸ್‌ಐ ಬಾಲಕರ ನಿಲಯದಲ್ಲಿ ಪುನರ್ವಸತಿಯನ್ನು ಕಲ್ಪಿಸಲಾಯಿತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತೆ ಗ್ಲೀಶಾ ಮೊಂತೆರೊ, ಇಂದ್ರಾಳಿ ರೈಲ್ವೇ ನಿಲ್ದಾಣದ ಆರ್‌ಪಿಎಪ್ ನಿರೀಕ್ಷಕ ಸಂತೋಷ್ ಗಾಂವ್ಕರ್ ಮತ್ತು ಮಕ್ಕಳ ಸಹಾಯವಾಣಿಯ ಕಸ್ತೂರಿ ಮತ್ತು ಪ್ರಮೋದ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News