ಉಳ್ಳಾಲ: ಜ. 26ರಂದು ಉಚಿತ ನೇತ್ರ ತಪಾಸಣೆ, ರಕ್ತದಾನ ಶಿಬಿರ​

Update: 2020-01-23 16:47 GMT

ಉಳ್ಳಾಲ: 70ನೇ ಗಣರಾಜ್ಯೋತ್ಸವ ಪ್ರಯುಕ್ತ ಎಸ್ಎಸ್ಎಫ್ ಬ್ಲಡ್ ಸೈಬೋ ದಕ್ಷಿಣ ಕನ್ನಡ ಹಾಗೂ ಎಸ್ಎಸ್ ಎಫ್ ಉಳ್ಳಾಲ ಸೆಕ್ಟರ್ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ‌ ಯೇನೆಪೊಯ ಮೆಡಿಕಲ್ ಕಾಲೇಜು ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ, ಚಿಕಿತ್ಸಾ ಶಿಬಿರ, ಉಚಿತ ಆರೋಗ್ಯ ತಪಾಸಣೆ ಹಾಗೂ ಬೃಹತ್ ರಕ್ತದಾನ ಶಿಬಿರವು ಜ. 26ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆ ತನಕ ಮಾಸ್ತಿಕಟ್ಟೆಯಲ್ಲಿ ನಡೆಯಲಿದೆ.

ತೊಕ್ಕೊಟ್ಟಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಕಾರ್ಯದರ್ಶಿ ಮುಝಾಮಿಲ್ ಅವರು ಈ ಬಗ್ಗೆ ಮಾಹಿತಿ ನೀಡಿದರು.

ಶಿಬಿರದಲ್ಲಿ ವೈದ್ಯಕೀಯ ವಿಭಾಗ ಚಿಕಿತ್ಸೆ, ಹೆರಿಗೆ ಮತ್ತು ಸ್ತ್ರೀ ರೋಗ ಚಿಕಿತ್ಸೆ, ಕಿವಿ ಮೂಗು ಮತ್ತು ಗಂಟಲು ಚಿಕಿತ್ಸೆ, ಮಕ್ಕಳ ಚಿಕಿತ್ಸೆ ಹಾಗೂ ಔಷಧಿ ವಿತರಣೆ ವಿಭಾಗ ಕಾರ್ಯಾಚರಿಸಲಿದೆ. ಶಿಬಿರವನ್ನು ಶಾಸಕ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಎಸ್ ಎಸ್ ಎಫ್ ವೆಸ್ಟ್ ಝೋನ್ ಅಧ್ಯಕ್ಷ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡುವರು. ಪಶ್ಚಿಮ‌ ಘಟ್ಟಗಳ ಸಂರಕ್ಷಣಾ ಸಮಿತಿ ಮಾಜಿ ನಿರ್ದೇಶಕ ರಾಮ್ ಪ್ರಸಾದ್ ಬೆಂಗಳೂರು ಹಾಗೂ ಸೈಯದ್ ಝುಬೈರ್ ತಂಙಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಡ್ ಹೆಲ್ತ್ ಕೇರ್ ಕರ್ನಾಟಕ  ಸಂಚಾಲಕ ನವಾಝ್ ಉಳ್ಳಾಲ, ನಿರ್ದೇಶಕ ಅಲ್ ಮಝ್ ಉಳ್ಳಾಲ, ಎಸ್ಎಸ್ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಶಬೀರ್ ಉಳ್ಳಾಲ, ಅಲ್ತಾಫ್ ಶಾಂತಿಭಾಗ್, ಮುಸ್ತಫಾ, ತಸ್ಲೀಮ್ ಹರೇಕಳ ಉಪಸ್ಥಿತರಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News