ಹಿಟ್ಲರ್ ನೀತಿಯತ್ತ ಭಾರತ : ಜೆಐಎಚ್ ರಾಜ್ಯಾಧ್ಯಕ್ಷ ಡಾ. ಬೆಲ್ಗಾಮಿ

Update: 2020-01-23 17:45 GMT

ಭಟ್ಕಳ: ಪ್ರಸ್ತುತ ಭಾರತ ಹಿಟ್ಲರ್ ನೀತಿಯತ್ತ ಸಾಗುತ್ತಿದ್ದು ಇದು ಮುಂಬರುವ ದಿನಗಳಲ್ಲಿ ದೇಶಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಲಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಘಟಕಾಧ್ಯಕ್ಷ ಡಾ. ಮುಹಮ್ಮದ್ ಸಾದ್ ಬೆಲ್ಗಾಮಿ ಕಳವಳ ವ್ಯಕ್ತಪಡಿಸಿದರು.

ಅವರು ಗುರುವಾರ ಸಂಜೆ ಇಲ್ಲಿನ ತಂಝೀಮ್ ಕಾರ್ಯಾಲಯದಲ್ಲಿ ನಡೆದ ಮುಖಂಡರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಫ್ಯಾಸಿಸ್ಟ್ ಶಕ್ತಿಗಳು ಈ ದೇಶವನ್ನು ಅಪಾಯದ ಅಂಚಿಗೆ ಕೊಂಡೊಯ್ಯುತ್ತಿದೆ ಎಂದ ಅವರು ಸಧ್ಯಕ್ಕೆ ದೇಶದ ಸಂವಿಧಾನ ಅಪಾಯದಲ್ಲಿ ಅದನ್ನು ರಕ್ಷಿಸಿ ಭಾರತವನ್ನು ಉಳಿಸುವ ಜವಾಬ್ದಾರಿ ಈ ದೇಶದ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದವರ ಹೆಗಲ ಮೇಲಿದೆ ಎಂದರು.

ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ. ಪ್ರಸ್ತಾವಿಕವಾಗಿ ಸ್ವಾಗತಿಸಿದರು. ಜೆಐಎಚ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜಿನಿಯರ್ ನಝೀರ್ ಆಹ್ಮದ್ ಖಾಝಿ ಅತಿಥಿಗಳನ್ನು ಪರಿಚಯಿಸಿದರು. ತಂಝೀಮ್ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವೇಝ್ ಅಧ್ಯಕ್ಷತೆ ವಹಿಸಿದ್ದರು.

ಜಮಾಅತೆ ಇಸ್ಲಾಮಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಬಿಲಾಲ್, ಶಿವಮೊಗ್ಗ ವಿಭಾಗ ಸಂಚಾಲಕ ಮೌಲಾನ ಸಲೀಮ್ ಉಮರಿ, ತಂಝೀಮ್ ಸಂಸ್ಥೆಯ ಮುಹಮ್ಮದ್ ಯೂನೂಸ್ ರುಕ್ನುದ್ದೀನ್, ಜೈಲಾನಿ ಶಾಬಂದ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News