ಜೋಗಿಬೆಟ್ಟು: ಜ. 26ರಂದು ರಿಫಾಯಿ ರಾತೀಬ್ ಮಜ್ಲಿಸ್

Update: 2020-01-23 18:09 GMT

ಜೋಗಿಬೆಟ್ಟು: ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ಇದರ ವತಿಯಿಂದ ತಾಜುಲ್ ಅರಿಫಿನ್ ಅಶ್ಶೆಖ್ ಅಹ್ಮದುಲ್ ಕಬೀರ್ ರಿಫಾಯಿ ತಂಙಳ್ ಅನುಸ್ಮರನಾರ್ಥ ರಿಫಾಯಿ ರಾತೀಬ್ ಮಜ್ಲಿಸ್ ಕಾರ್ಯಕ್ರಮವು ಜ. 26ರಂದು ಮಗ್ರೀಬ್ ನಮಾಝ್ ಬಳಿಕ ನಡೆಯಲಿದೆ.

ಅಸ್ಸಯ್ಯದ್ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಮತ್ತು ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿ ದ್ದಾರೆ. ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ಇದರ ಅಧ್ಯಕ್ಷ ಯು ಇ ಝಖರಿಯಾ ಹಾಜಿ ಅಗ್ನಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಯು ಕೆ ಕಲಂದರ್ ಮದನಿ ಉದ್ಘಾಟನೆ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News