ಅಮಲು ಪದಾರ್ಥ ನೀಡಿ ಸೊತ್ತು ಕಳವು: ಇಬ್ಬರ ಸೆರೆ

Update: 2020-01-24 17:39 GMT

ಮಂಗಳೂರು, ಜ.24: ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಗೆ ಟೀ ಮೂಲಕ ಅಮಲು ಪದಾರ್ಥ ಬೆರೆಸಿ ನೀಡಿ ಅವರನ್ನು ಪ್ರಜ್ಞಾಹೀನರನ್ನಾಗಿಸಿ ಸೊತ್ತುಗಳನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮೂಡ್ನೂರು ಗ್ರಾಮದ ಕರ್ನೂರು ನಾಗನಡ್ಕ ನಿವಾಸಿ ಯಾಕೂಬ್ (37) ಹಾಗೂ ಕರ್ನೂರು ನಿವಾಸಿ ಪಾಲತಾಡಿ ಮುಹಮ್ಮದ್ (35) ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

2019ರ ಆಗಸ್ಟ್ 22ರಂದು ರಾತ್ರಿ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಟೀ ಮೂಲಕ ಪ್ರಯಾಣಿಕರೊಬ್ಬರಿಗೆ ಅಮಲು ಪದಾರ್ಥ ನೀಡಿದ್ದರು. ಅವರು ಪ್ರಜ್ಞೆ ತಪ್ಪಿ ಬಿದ್ದಾಗ ಅವರ ಅಮೂಲ್ಯ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದರು. ಈ ಪೈಕಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಆರೋಪಿಗಳು ಬೇರೆ ಕಡೆ ಎಲ್ಲಾದರೂ ದುಷ್ಕೃತ್ಯ ನಡೆಸಿ, ಪತ್ತೆಯಾಗದಿದ್ದರೆ ಅಥವಾ ಯಾವುದಾದರೂ ಪ್ರಕರಣದಲ್ಲಿ ಬೇಕಾಗಿದ್ದರೆ ರೈಲ್ವೆ ಪೊಲೀಸ್ ಠಾಣೆ 0824-2220559ಗೆ ಸಂಪರ್ಕಿಸಲು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News