ಮನುಕುಲದ ಒಳಿತಿಗಾಗಿ ಉತ್ತಮ ಗುರಿಯೊಂದಿಗೆ ಸಾಗಿ-ಡಾ.ಪೌಲ್ ಪರತಝಹಮ್

Update: 2020-01-24 18:02 GMT

ಮಂಗಳೂರು, ಜ. 24: ಮನುಕುಲದ ಒಳಿತಿಗಾಗಿ ಸರಿಯಾದ ಗುರಿ ಪರಿಶ್ರಮದೊಂದಿಗೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು  ಉತ್ತಮ ಕನಸು ಗಳೊಂದಿಗೆ ಮುನ್ನಡೆಯಿರಿ ಎಂದು  ಬೆಂಗಳೂರಿನ ಸೈಂಟ್ ಜೋಸೆಫ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ವಂ.ಡಾ.ಪೌಲ್ ಪರತಝಹಮ್ ತಿಳಿಸಿದ್ದಾರೆ.

ಅವರು ಇಂದು ನಗರದ ಫಾದರ್ ಮುಲ್ಲರ್ ಕನ್ವೆಶನ್ ಸೆಂಟರ್ ನಲ್ಲಿ ಹಮ್ಮಿಕೊಂಡ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಹಾಗೂ ಇತರ ವಿಜ್ಞಾನ ಶಿಕ್ಷಣ ಸಂಸ್ಥೆ ಗಳ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾ ಡುತ್ತಿದ್ದರು.

ಜಗತ್ತಿನ ಸಾಕಷ್ಟು ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಗಮನಿಸಿದರೆ. ಬಹುತೇಕ ಮಂದಿ  ತಮ್ಮ ಸಾಧನೆಯ ಹಾದಿಯಲ್ಲಿ ಹಲವು ಎಡರು ತೊಡರು ಗಳನ್ನು ಮೀರಿ ಮಹಾನ್ ಸಾಧಕರಗಿದ್ದಾರೆ. ಆದರೆ ಅವರ ಮುಂದೆ ತಾನು ಭವಿಷ್ಯದಲ್ಲಿ ಏನಾದರೂ ಮಾಡಬೇಕೆಂಬ ಕನಸುಗಳಿತ್ತು.ಆ ಕನಸುಗಳನ್ನು ಸಾಕಾರಗೊಳಿಸಲು ಅವರ ಆಂಗಿಕ ವಿಕಲೆಗಳು ಇತರ ಅಡೆತಡೆಗಳು ಅಡ್ಡಿಯಾಗಲಿಲ್ಲ .ಉದಾಹರಣೆಗೆ ಅಮೆರಿಕಾದ ಅಧ್ಯಕ್ಷನಾಗಿದ್ದ ವಿನ್ಸೆಂಟ್ ಚರ್ಚಿಲ್ ಎಂಟನೆ ತರಗತಿಯಲ್ಲಿ ಮೂರು ಬಾರಿ ಅನುತೀರ್ಣನಾಗಿದ್ದರೂ, ಸರಿಯಾಗಿ ಮಾತನಾಡಲಾಗದ ಸಮಸ್ಯೆಯನ್ನು ಹೊಂದಿದ್ದರೂ ಸಮರ್ಥ ನಾಯಕನಾಗುತ್ತಾರೆ. ತಮ್ಮ ಪ್ರಯತ್ನದಿಂದ ಉತ್ತಮ ಭಾಷಣಕಾರ ನಾಗುತ್ತಾರೆ.ಅಂಧ ಮತ್ತು ಕಿವುಡರಾಗಿದ್ದ ಹೆಲೆನ್ ಕೆಲ್ಲರ್  ತನ್ನ ಪ್ರಯತ್ನದಿಂದ ಸಾಧನೆ ಮಾಡಿ ಡಾಕ್ಟರೇಟ್ ಪದವಿ ಪಡೆಯುತ್ತಾರೆ. ಈ ಸಂದರ್ಭದಲ್ಲಿ  ಅವರು ಹೇಳು ವಂತೆ ಅಂಧಕಾರ ಮತ್ತು ಮೌನ ಮಾನವನ ಸ್ಫೂರ್ತಿ ಗೆ ಅಡ್ಡಿಯಾಗದು ಎನ್ನುವ ಮಾತುಗಳು ಎಲ್ಲಾ ಅಡೆತಡೆಗಳನ್ನು ಮೀರಿ  ಪರಿಶ್ರಮದೊಂದಿಗೆ ಸಾಧನೆ ಮಾಡ ಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ. ಬದುಕಿನಲ್ಲಿ ಛಲದೊಂದಿಗೆ ನಮ್ಮ ಗುರಿತಲುಪಬೇಕಾಗಿದೆ  ಎಂದು ಯುವ ವೈದ್ಯರಿಗೆ ಶುಭಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮ ಪ್ರಾಂತ್ಯದ ಬಿಷಪ್ ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆ ಗಳ ಅಧ್ಯಕ್ಷ ಅತೀ.ವಂ.ಡಾ.ಪೀಟರ್ ಪೌಲ್ ಸಲ್ದಾನ ಮಾತನಾಡುತ್ತಾ ಜಗತ್ತಿನಲ್ಲಿ ಹಲವು ಸವಾಲುಗಳು ನಮ್ಮ ಮುಂದಿವೆ ಈ ಸಂದರ್ಭದಲ್ಲಿ ಮಾನವೀಯತೆ, ಅನುಕಂಪ, ದಯೆ,ಸಹಾನುಭೂತಿ ಯೊಂದಿಗೆ ಮನುಕುಲದ ದ ಸೇವೆ ನಮ್ಮ ಗುರಿಯಾಗಬೇಕಾಗಿದೆ. ಹಿಂಸೆ ಜಗತ್ತಿನಲ್ಲಿ ಕೊನೆಯಾಗಬೇಕಾಗಿದೆ.ಎಷ್ಟೇ ಕ್ರೂರ ಕ್ರತ್ಯ ಎಸಗಿದವನಿಗೂ ಮರಣದಂಡನೆ ನೀಡಿದ ತಕ್ಷಣ ಆ ಸಮಸ್ಯೆ ಗೆ ಶಾಶ್ವತ ಪರಿಹಾರ ದೊರೆಯಲು ಸಾಧ್ಯವಿಲ್ಲ. ತಪ್ಪು ಮಾಡಿದ ವ್ಯಕ್ತಿ ಯ ಜೊತೆ ಇರುವ ಏನೂ ತಪ್ಪು ಮಾಡದ ಆತನ ಕುಟುಂಬಕ್ಕೆ ಅನ್ಯಾಯ ವಾಗದಂತೆ ನೋಡಬೇಕಾಗಿದೆ.ಈ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ದೇಶಗಳು ಮರಣ ದಂಡನೆಯ ಶಿಕ್ಷೆಯನ್ನು ಕೈ ಬಿಡುವ ದಿಕ್ಕಿನಲ್ಲಿ ಸಾಗುತ್ತಿವೆ. ಸಾಕಷ್ಟು ಗುಂಪುಗಳಾಗಿ ವಿಂಗಡಣೆಯಾಗಿರುವ ಅಪನಂಬಿಕೆಗಳು ಹುಟ್ಟಿಕೊಂಡಿರುವ ಸಮಾಜದ ಜನರ ನಡುವೆ ತಾಳ್ಮೆ,ಸಹನೆ  ವ್ರತ್ತಿ ಗೌರವದೊಂದಿಗೆ. ಜೀವ ಉಳಿಸಲು ನಿಮ್ಮ ವೈದ್ಯಕೀಯ ಕೌಶಲ ವನ್ನು ಬಳಸಿ ಎಂದು ಬಿಷಪ್ ಯುವ ವೈದ್ಯ ರಿಗೆ ಶುಭ ಹಾರೈಸಿದರು.

ಈ ವರ್ಷ ವನ್ನು ಚರ್ಚ್ ಗಳಲ್ಲಿ ಮಾನವ ಜೀವ ದ ಸಂರಕ್ಷಣೆ ಯ ವರ್ಷ ವಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಗಾಂಗ ದಾನ,ರಕ್ತದಾನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು.ಕಳೆದ ವರ್ಷ 48 ಕೋಟಿ ರೂ ಗಳನ್ನು ಸಮಾಜದ ದುರ್ಬಲರ ಸೇವಾ ಚಟುವಟಿಕೆ ಬಳಸಲಾ ಗಿದೆ ಎಂದು ಬಿಷಪ್ ತಿಳಿಸಿದ್ದಾರೆ.

ಸಮಾರಂಭದ ವೇದಿಕೆಯಲ್ಲಿ ಫಾದರ್ ಮುಲ್ಲರ್ ಚ್ಯಾರಿಟೇಬಲ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕೊಯೆಲ್ಲೋ,ಡೀನ್  ಜಯಪ್ರಕಾಶ್ ಆಳ್ವ,ಫಾದರ್ ಮುಲ್ಲರ್ ಮರಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ವಂ.ರುಡಾಲ್ಫ್ ರವಿ ಡೇಸಾ,ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಡಳಿತಾಧಿಕಾರಿ ವಂ.ಅಜಿತ್ ಮಿನೇಜಸ್, ಎಫ್ಎಂಎಚ್ ಟಿ ಆಡಳಿತಾಧಿ ಕಾರಿ ವಂ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಎಫ್ಎಮ್ ಸಿಎಚ್ ಸಹಾಯಕ ಆಡಳಿತಾಧಿಕಾರಿ ನೆಲ್ಸನ್ ದೀರಜ್ ಪೈ,ಫಾದರ್ ಮುಲ್ಲರ್ ವಾಕ್ ,ಶ್ರವಣ ಕಾಲೇಜಿನ ಪ್ರಾಂಶುಪಾಲ ಅಖಿಲೇಶ್ ಪಿ.ಎಂ ಮೊದಲಾದ ವರು ಉಪಸ್ಥಿತರಿದ್ದರು.

2020ನೆ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ 157 ಎಂಬಿಬಿಎಸ್ ಸೇರಿದಂತೆ ಒಟ್ಟು 407 ವಿವಿಧ ವಿಭಾಗದ ಪದವೀಧರ ರಿಗೆ ಪದವಿ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News