×
Ad

ಫೆ.8-10: ಎಣ್ಮೂರು ಮಖಾಂ ಉರೂಸ್, ಮೂರು ದಿನಗಳ ಧಾರ್ಮಿಕ ಮತ ಪ್ರವಚನ

Update: 2020-01-24 23:41 IST

ಸುಳ್ಯ ಜ.24: ಇತಿಹಾಸ ಪ್ರಸಿದ್ಧ ಎಣ್ಮೂರು ಜುಮಾ ಮಸ್ಜಿದ್ ಮತ್ತು ದರ್ಗಾ ಶರೀಫ್‌ನಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ಹಾಗೂ ಮೂರು ದಿವಸಗಳ ಧಾರ್ಮಿಕ ಪ್ರವಚನ ಫೆ.8,9 ಮತ್ತು 10ರಂದು ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಮಸೀದಿಯ ಗೌರವಾಧ್ಯಕ್ಷ ಕುಂಞಿಪಳ್ಳಿ ಐವತ್ತೊಕ್ಲು ಹಾಗೂ ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಪಡ್ಪಿನಂಗಡಿ ಹೇಳಿದರು.

ಸುಳ್ಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆ.8ರಂದು ಮಸೀದಿಯ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ಪಟೇಲ್ ಧ್ವಜಾರೋಹಣ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದು ರಾತ್ರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ಅಸ್ಸೈಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ದುಆಶೀರ್ವಚನ ನೀಡಲಿದ್ದಾರೆ. ಎಣ್ಮೂರು ಮಸೀದಿಯ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಅಲ್‌ಅಝ್‌ಹರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಗಾರರಾಗಿ ರಾಫಿ ಅಹ್ಸನಿ ಕಾಂತಪುರಂ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸುವರು. ಫೆ.9ರಂದು ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ದುಆಶೀರ್ವಚನ ನೀಡಲಿದ್ದಾರೆ. ಸಿರಾಜುದ್ದೀನ್ ಅಲ್ ಖಾಸಿಮಿ ಪತ್ತನಾಪುರಮ್ ಕೇರಳ ಮುಖ್ಯ ಭಾಷಣ ಮಾಡಲಿದ್ದಾರೆ. ಫೆ.10ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು ಝೈನುಲ್ ಆಬಿದೀನ್ ತಂಙಲ್ ಎಣ್ಮೂರು ಮುಚ್ಚಿಲ ದುಆಶೀರ್ವಚನ ನೀಡಲಿದ್ದಾರೆ. ಹಂಝ ಮಿಸ್ಬಾಹಿ ಓಟೆಪದವು ಮುಖ್ಯ ಭಾಷಣ ಮಾಡಲಿದ್ದು, ತಾಪಂ ಸದಸ್ಯ ಅಬ್ದುಲ್ ಗಫೂರ್ ಮೊದಲಾದವರು ಭಾಗವಹಿಸುವರು. ಸಮಾರಂಭದಲ್ಲಿ ದಫ್ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ಖಾದರ್ ಕೊಳ್ತಂಗೆರೆ, ಅಬ್ದುರ್ರಹ್ಮಾನ್ ಐವತ್ತೊಕ್ಲು, ಅಬ್ದುಲ್ಲ ಮರಕ್ಕಡ, ರಫೀಕ್ ಟಿ.ಎಸ್., ದಾವೂದ್ ಮುಚ್ಚಿಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News