ತುಂಬೆ: ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ

Update: 2020-01-24 18:14 GMT

ಬಂಟ್ವಾಳ: ಶಿಕ್ಷಕರು ಮತ್ತು ಪೋಷಕರ ಸಹಕಾರವಿದ್ದಾಗ ವಿದ್ಯಾರ್ಥಿಗಳ ಕಲಿಕೆ ಉತ್ತಮವಾಗುತ್ತದೆ ಜೊತೆಗೆ ಪಾಠ್ಯೇತರ ಚಟುವಟಿಕೆ ಮತ್ತು ನಡತೆ ಸುಧಾರಿಸಿ ಮಾನವೀಯ ಮೌಲ್ಯಗಳನ್ನು ಮಕ್ಕಳು ಬೆಳೆಸಿಕೊಳ್ಳುತ್ತಾರೆ ಎಂದು ಶಾಸಕ ಯು. ಟಿ. ಖಾದರ್ ಅವರು ತುಂಬೆ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಮಾವೇಶ ಹಾಗೂ ಕ್ರೀಡಾಕೂಟದಲ್ಲಿ ಸಾಧಕ ಹಿರಿಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಸಂಸ್ಥಾಪಕರಾದ ಡಾ. ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್‍ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಧಕ ಹಿರಿಯ ವಿದ್ಯಾರ್ಥಿಗಳಾದ ಡಾ. ಅನ್ವರ್ ಅಮೆಮಾರ್ ಸೂಫಿ, ಡಾ. ಮಹಮ್ಮದ್ ಆಸೀಫ್, ಡಾ. ಅಭಿಮಾನ್ ಬಲ್ಯಾಯ, ಜಿ. ಎಸ್. ಗೋಪಾಲ್ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ತಾಲೂಕು ಪಂಚಾಯತ್ ಸದಸ್ಯ  ಗಣೇಶ್ ಸುವರ್ಣ, ತುಂಬೆ ಆಂಗ್ಲ ಮಾಧ್ಯಮ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೇಲ್, ಕಾರ್ಯಕಾರಿ ಸಮಿತಿ ಸದಸ್ಯರು, ರಕ್ಷಕರಾದ ಹನೀಫ್ ಸಜೀಪ, ನಿವೃತ್ತ ಪ್ರಾಧ್ಯಾಪಕರಾದ ಫಲೂಲ್ ಮಾಸ್ಟರ್ ಬೆದ್ರೋಡಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ದೈಹಿಕ ಶಿಕ್ಷಕರಾದ ಜಗದೀಶ್ ರೈ ಬಿ. ನಡುವಳಚ್ಚಿಲ್,  ಸಾಯಿರಾಂ ನಾಯಕ್, ಮೋಲಿ ಎಡ್ನಾ ಗೊನ್ಸಾಲ್ವ್ ಇವರನ್ನು ಗೌರವಿಸಲಾಯಿತು.  ತುಂಬೆ ಪ. ಪೂ. ಕಾಲೇಜಿನ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವರು ಅಭಿನಂದನಾ ಭಾಷಣ ಮಾಡಿದರು. ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ನಿಸಾರ್ ಅಹಮ್ಮದ್ ವಳವೂರು ಸ್ವಾಗತಿಸಿದರು.  ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ ರೈ ಬಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.  ಹಿರಿಯ ಉಪನ್ಯಾಸಕರಾದ ವಿ. ಎಸ್. ಭಟ್ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News