ದ.ಕ. ಜಿಲ್ಲಾ ರಾಜ್ಯೋತ್ಸವ ಪುರಸ್ಕಾರಕ್ಕೆ 27 ಸಾಧಕರ ಆಯ್ಕೆ

Update: 2020-01-25 14:07 GMT

ಮಂಗಳೂರು, ಜ.25: 2019-20ನೇ ಸಾಲಿನ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 27 ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಜ.26ರಂದು ನಗರದ ನೆಹರೂ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನಿಸಲಾಗುವುದು.

ಮಂಗಳೂರು ತಾಲೂಕಿನಿಂದ 13 ಸಾಧಕರು, ಬಂಟ್ವಾಳದಿಂದ ಐವರು, ಬೆಳ್ತಂಗಡಿಯಿಂದ ಮೂವರು, ಪುತ್ತೂರಿನಿಂದ ಇಬ್ಬರು, ಸುಳ್ಯ, ಮುಲ್ಕಿ, ಮೂಡುಬಿದಿರೆ, ಕಡಬ ತಾಲೂಕಿಗೆ ತಲಾ ಒಬ್ಬರಂತೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಂಗಳೂರು ತಾಲೂಕಿನ ಏಳಿಂಜೆ ಲಯನ್ ಎಂ.ಜೆ.ಎಫ್.ವೈ. ಯೋಗೀಶ್ ರಾವ್ (ಸಮಾಜಸೇವೆ), ಹೃತ್ವಿಕ್ ಅಲೆವೂರಾಯ ಕೆ.ವಿ. (ಕ್ರೀಡೆ), ಎನ್.ಎಸ್.ಉಮೇಶ್ ದೇವಾಡಿಗ (ಸಮಾಜಸೇವೆ), ಪ್ರದೀಪ್‌ಕುಮಾರ್ (ಕ್ರೀಡೆ), ರಕ್ಷಿತ್ ಶೆಟ್ಟಿ (ಕ್ರೀಡೆ), ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳ (ಕಲೆ-ಸಂಘಸಂಸ್ಥೆ), ಗಂಗಾಧರ ಪುತ್ರನ್ ಯಾನೆ ಗಂಗೇಶ್ ಬೋಳಾರ್ (ಪರಿಸರವಾದಿ), ಅನಘಾ (ಕ್ರೀಡೆ), ಲಕ್ಷ್ಮೀನಾರಾಯಣ ಯಾನೆ ಅಣ್ಣು ಪೂಜಾರಿ (ಕಲೆ), ವಿನಾಯಕ ಫ್ರೆಂಡ್ಸ್ ಕ್ಲಬ್ (ಸಮಾಜಸೇವೆ-ಸಂಘಸಂಸ್ಥೆ), ಆತ್ಮಶಕ್ತಿ ವಿವಿದೋದ್ಧೇಶ ಸಹಕಾರಿ ಸಂಘ ಮಂಗಳೂರು (ಸಮಾಜಸೇವೆ-ಸಂಘಸಂಸ್ಥೆ), ಬಿರುವೆರ್ ಕುಡ್ಲ ಮಂಗಳೂರು (ಸಮಾಜಸೇವೆ-ಸಂಘಸಂಸ್ಥೆ), ಎಂ.ಅದ್ವಿಕ ಶೆಟ್ಟಿ (ಕಲೆ) ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಂಟ್ವಾಳ ತಾಲೂಕಿನ ಎಚ್.ಕೆ.ನಯನಾಡು (ಕಲೆ ಮತ್ತು ಸಾಹಿತ್ಯ), ಪ್ರಶಾಂತ್ ಜೋಗಿ (ಕಲೆ), ಅಶೋಕ್ ಪೊಳಲಿ (ಕಲೆ), ರಾಜೇಶ್ ವಿಟ್ಲ (ಕಲೆ), ವೆಂಕಪ್ಪ ಕಾಜವ (ಸಮಾಜಸೇವೆ) ಜಿಲ್ಲಾ ರಾಜ್ಯೋತ್ಸ ಪ್ರಶಸ್ತಿಗೆ ಭಾಜನರಾದರು.

ಬೆಳ್ತಂಗಡಿ ತಾಲೂಕಿನ ಶ್ರೀಧರಗೌಡ ಕೆಂಗುಡೇಲು (ಸಮಾಜಸೇವೆ), ವಸಂತ ಸಾಲ್ಯಾನ್ (ಸಮಾಜಸೇವೆ), ಸೇವಾ ಭಾರತಿ ಸಂಸ್ಥೆ (ಸಮಾಜಸೇವೆ-ಸಂಘಸಂಸ್ಥೆ), ಪುತ್ತೂರು ತಾಲೂಕಿನ ಎಸ್.ಕೆ. ಆನಂದಕುಮಾರ್ (ಸಮಾಜಸೇವೆ), ಜಗದೀಶ್ ಆಚಾರ್ಯ (ಕಲೆ), ಸುಳ್ಯ ತಾಲೂಕಿನ ಡಾ.ಉಮರ್ ಬೀಜದಕಟ್ಟೆ (ಸಮಾಜಸೇವೆ), ಮುಲ್ಕಿ ತಾಲೂಕಿನ ಡಾ.ಹರೀಶ್ವಂದ್ರ ಪಿ. ಸಾಲ್ಯಾನ್ (ಸಾಹಿತ್ಯ), ಕಡಬ ತಾಲೂಕಿನ ಸುರೇಶ್ ರೈ ಸೂಡಿಮುಳ್ಳು (ಸಮಾಜಸೇವೆ), ಮೂಡುಬಿದಿರೆ ತಾಲೂಕಿನ ವಿದ್ವಾನ್ ಎ.ರಘುನಾಥ ಸೇರಿಗಾರ (ಕಲೆ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News