ಬಿಗ್‌ ಬಝಾರ್‌ನಲ್ಲಿ ಶಾಪಿಂಗ್ ಉತ್ಸವ: ಜ.26ರಂದು ಕೊನೆಯ ದಿನ

Update: 2020-01-25 14:33 GMT

ಮಂಗಳೂರು, ಜ. 25: ದೇಶದ ಗಣರಾಜ್ಯೋತ್ಸವ ಪ್ರಯುಕ್ತ ಜ. 22ರಿಂದ 26ರವರೆಗೆ ಮಂಗಳೂರಿನ ಬಿಜೈ ಮತ್ತು ಅತ್ತಾವರದ  ಬಿಗ್ ಬಝಾರ್‌ನಲ್ಲಿ ದೇಶದ ಅತ್ಯಂತ ದೊಡ್ಡ ಶಾಪಿಂಗ್ ಉತ್ಸವ ನಡೆಯುತ್ತಿದ್ದು, ಈ ಅವಧಿಯಲ್ಲಿ ದೇಶಾದ್ಯಂತ ಇರುವ 275 ಬಿಗ್ ಬಝಾರ್‌ನ ಜೆನ್ ನೆಕ್ಟ್ಸ್ ಮತ್ತು ಹೈಪರ್‌ ಸಿಟಿ ಮಳಿಗೆಗಳಲ್ಲಿ ‘ಅತ್ಯಂತ ಕಡಿಮೆ ಬೆಲೆಯ 5 ದಿನಗಳು’ ನಡೆಯುತ್ತಿದೆ.

ಈ ಅವಧಿಯಲ್ಲಿ ಫ್ಯಾಷನ್ ವಸ್ತುಗಳ ಮೇಲೆ ಶೇ.50ರಷ್ಟು ರಿಯಾಯಿತಿ, ಆಹಾರ ಹಾಗೂ ದಿನಸಿ ಪದಾರ್ಥಗಳ ಮೇಲೆ ಎರಡು ಕೊಳ್ಳಿ ಒಂದು ಉಚಿತ ಪಡೆಯಿರಿ ಕೊಡುಗೆ ಹಾಗೂ ರುಪೇ ಕಾರ್ಡ್‌ಗಳ ಮೇಲೆ ಹೆಚ್ಚುವರಿಯಾಗಿ ಶೇ.10 ರಿಯಾಯಿತಿ ದೊರೆಯಲಿದೆ.

ಈ ಐದು ದಿನಗಳಲ್ಲಿ ಬಿಗ್‌ ಬಝಾರ್‌ನಲ್ಲಿ ಶಾಪಿಂಗ್ ಹೊಸ ಅನುಭವವನ್ನು ನೀಡಲಿದೆ. ಆಹಾರ, ಫ್ಯಾಷನ್, ಹೋಮ್ ಫರ್ನಿಷಿಂಗ್, ಲಗೇಜ್, ಕಿಚನ್‌ವೇರ್ ಹಾಗೂ ದೈನಂದಿನ ಅಗತ್ಯ ವಸ್ತುಗಳ ಮೇಲೆ ಮೆಗಾ ಡೀಲ್‌ಗಳು, ಕಾಂಬೊ ಆಫರ್‌ಗಳು ಹಾಗೂ ರಿಯಾಯಿತಿಗಳು ದೊರೆಯಲಿವೆ.

ಹೋಮ್ ಕಿಚನ್ ಕಾಂಬೊ ಸೆಟ್‌ನಲ್ಲಿ 13,505 ರೂ. ಮೌಲ್ಯದ ವಸ್ತುಗಳು ಕೇವಲ 4,999ರೂ.ಗಳಿಗೆ ದೊರೆಯಲಿದೆ. 43 ಇಂಚಿನ 40,000ರೂ. ಮೌಲ್ಯದ ಕೊರ್ಯೊ ಟಿವಿ ಸೆಟ್ ಕೇವಲ 14,999ರೂ.ಗೆ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News