ಬಜಾಲ್ ಪಕ್ಕಲಡ್ಕದಲ್ಲಿ ಪ್ರತಿಭಾ ಪುರಸ್ಕಾರ

Update: 2020-01-25 15:14 GMT

ಬಜಾಲ್, ಜ.25: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ಪಕ್ಕಲಡ್ಕ ಸೆಂಟರ್ ವತಿಯಿಂದ ಬಜಾಲ್ ಪಕ್ಕಲಡ್ಕದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಸ್ನೇಹ ಸದನದ ಇಬ್ರಾಹೀ ಸಯೀದ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಬ್ಬುಕಟ್ಟೆಯ ಹಿರಾ ವುಮೆನ್ಸ್ ಕಾಲೇಜಿನ ಅಧ್ಯಾಪಕಿ ಆಯಿಷಾ ಯು.ಕೆ. ಮಾತನಾಡಿ ವಿದ್ಯಾರ್ಥಿಗಳು ತಮಗೆ ಒದಗಿ ಬರುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ವಿದ್ಯೆ ಇದ್ದರೆ ಸಾಧನೆಗೆ ಸಾವಿರ ದಾರಿಗಳಿವೆ ಎಂದರು.

ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಬಿಐಇ ಪಕ್ಕಲಡ್ಕ ಸಂಚಾಲಕಿ ರೈಹಾನ ಕೋರ್ಸ್‌ಗಳನ್ನು ಪರಿಚಯ ಮಾಡಿದರು. ಸ್ನೇಹ ಪಬ್ಲಿಕ್ ಸ್ಕೂಲ್ನ ಮುಖ್ಯಶಿಕ್ಷಕಿ ನುಶ್ರತ್ ಖುರೇಶ್ ಅನಿಸಿಕೆ ವ್ಯಕ್ತಪಡಿಸಿದರು. ಹ್ಯೂಮನ್ ವೆಲ್ಫೇರ್ ಇದರ ಸಂಚಾಲಕ ಯೂಸುಫ್ ಪಕ್ಕಲಡ್ಕ ಸಮಾರೋಪ ನುಡಿಗಳನ್ನಾಡಿದರು. ಜಮಾಅತೆ ಇಸ್ಲಾಮಿ ಪಕ್ಕಲಡ್ಕ ಇದರ ಮಹಿಳಾ ಘಟಕದ ಅಧ್ಯಕ್ಷೆ ಖನೀಜ್ಹ್ ಫಾತಿಮಾ ಸ್ವಾಗತಿಸಿದರು. ಮುದಸ್ಸಿರ್ ಕಿರಾಅತ್ ಪಠಿಸಿದರು ಅಶೀರುದ್ದೀನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News