ಜ.26: ಗಣರಾಜ್ಯೋತ್ಸವ ಪ್ರಯುಕ್ತ ಕವಿಗೋಷ್ಠಿ

Update: 2020-01-25 15:20 GMT

ಮಂಗಳೂರು, ಜ.25: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಜ.26ರಂದು ಅಪರಾಹ್ನ 3 ಗಂಟೆಗೆ ನಗರದ ಪುರಭವನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.

ಹಿರಿಯ ಯಕ್ಷಗಾನ ವಿದ್ವಾಂಸ, ಸಾಹಿತಿ ಪೊಳಲಿ ನಿತ್ಯಾನಂದ ಕಾರಂತ ಗಣರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ. ಈ ಸಂದರ್ಭ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ಉಷಾ ಮಂದಾರ (ಕನ್ನಡ), ಜಯಾನಂದ ಪೆರಾಜೆ (ಕನ್ನಡ), ಬಿ.ಸತ್ಯಾವತಿ ಭಟ್ ಕೊಳಚಪ್ಪು(ಕನ್ನಡ), ಶಾಂತಾ ಪುತ್ತೂರು (ಕನ್ನಡ), ಪೂವಪ್ಪನೇರಳಕಟ್ಟೆ (ತುಳು), ಶ್ರೀಕೃಷ್ಣ ಅತಾನಲ (ಸಂಸ್ಕೃತ), ಡಾ.ಪಿ.ವಿ.ಶೋಭಾ (ಹಿಂದಿ), ಜೆ.ಎ.ಎಂ.ಫೆರ್ನಾಂಡಿಸ್ (ಕೊಂಕಣಿ), ಉಮೇಶ ಕಾರಂತ (ಕುಂದಾಪ್ರ ಕನ್ನಡ), ರಮ್ಯಾಶ್ರೀ ನಡುಮನೆ (ಅರೆಭಾಷೆ), ಕೆ.ಪಿ.ಅಬ್ದುಲ್ ಖಾದರ್ ಕುತ್ತೆತ್ತೂರು (ಬ್ಯಾರಿ) ಕವನಗಳನ್ನು ವಾಚಿಸಲಿದ್ದಾರೆ.

ಮಧ್ಯಾಹ್ನ ಪೊಲೀಸ್ ಬ್ಯಾಂಡ್‌ನೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ವಿವಿಧ ಶಾಲಾ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರಗಲಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News